ದೇಶ

ಹಿಂದುತ್ವವನ್ನು ಇಸ್ಲಾಮಿಕ್ ಉಗ್ರ ಸಂಘಟನೆಗೆ ಹೋಲಿಸಿದ ಖುರ್ಷಿದ್; ಗುಲಾಂ ನಬಿ ಆಜಾದ್ ಆಕ್ಷೇಪ

Srinivas Rao BV

ನವದೆಹಲಿ: ಹಿಂದುತ್ವವನ್ನು ಇಸ್ಲಾಮಿಕ್ ಸ್ಟೇಟ್ ಹಾಗೂ ಬೊಕೊ ಹರಾಮ್ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಈಗ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ಸಲ್ಮಾನ್ ಖುರ್ಷಿದ್ ತಮ್ಮ ಇತ್ತೀಚಿನ ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಮಿಕ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿದ್ದು ಈ ಬಗ್ಗೆ ಕಾಂಗ್ರೆಸ್ ನಾಯಕರೇ ಆದ ಗುಲಾಂ ನಬಿ ಆಜಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆಜಾದ್, "ನಾವು ಹಿಂದುತ್ವವನ್ನು, ಹಿಂದೂ ಸಂಸ್ಕೃತಿಯಿಂದ ಬೇರೆಯದ್ದಾಗಿರುವ ರಾಜಕೀಯ ಸಿದ್ಧಾಂತವಾಗಿ ಒಪ್ಪದೇ ಇರಬಹುದು, ಆದರೆ ಹಿಂದುತ್ವವನ್ನು ಐಎಸ್ಐಎಸ್ ಹಾಗೂ ಜಿಹಾದಿ ಇಸ್ಲಾಮ್ ಗೆ ಹೋಲಿಕೆ ಮಾಡುವುದು ತಪ್ಪು ಹಾಗೂ ಉತ್ಪ್ರೇಕ್ಷೆಯಾಗಲಿದೆ ಎಂದು ಆಜಾದ್ ಅಭಿಪ್ರಾಯಪಟ್ಟಿದ್ದಾರೆ.

ಅಯೋಧ್ಯೆಯ ತೀರ್ಪಿನ ಕುರಿತಾಗಿ ಸಲ್ಮಾನ್ ಖುರ್ಷಿದ್ ಬರೆದಿರುವ Sunrise Over Ayodhya: Nationhood in Our Times ಎಂಬ ಪುಸ್ತಕ ನ.10 ರಂದು ಬಿಡುಗಡೆಯಾಗಿದೆ.

ಈ ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಮಿಕ್ ಉಗ್ರವಾದಿಗಳಿಗೆ ಹೋಲಿಕೆ ಮಾಡಿರುವುದರ ವಿರುದ್ಧ ದೆಹಲಿ ಮೂಲದ ವಕೀಲ ವಿವೇಕ್ ಗರ್ಗ್, ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ದೂರು ನೀಡಿದ್ದರು.

ಸಂತರು, ಸನ್ಯಾಸಿಗಳಿಗೆ ತಿಳಿದಿದ್ದ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವದ ಪ್ರಬಲ ಆವೃತ್ತಿ ಬದಿಗೆಸರಿಸಿದೆ. ಇದು ಎಲ್ಲಾ ಗುಣಮಟ್ಟದಿಂದಲೂ ಜಿಹಾದಿ ಇಸ್ಲಾಮ್ ನ ಐಎಸ್ಐಎಸ್ ಹಾಗೂ ಬೋಕೋ ಹರಾಮ್ ನ ಮಾದರಿಯಲ್ಲೇ ಇದೆ" ಎಂದು ಬರೆದಿದ್ದರು.

SCROLL FOR NEXT