ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

2024 ಆಗಸ್ಟ್ ವರೆಗೂ ಎನ್ ಸಿಬಿ ಮುಖ್ಯಸ್ಥರಾಗಿ ಎಸ್ ಎನ್ ಪ್ರಧಾನ್ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು ಆಗಸ್ಟ್ 31, 2024 ಅಥವಾ ಮುಂದಿನ ಆದೇಶದವರೆಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಎಸ್ ಎನ್ ಪ್ರಧಾನ್
Nagaraja AB
Updated On : 11 Nov 2021, 2:55 pm

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು  ಆಗಸ್ಟ್ 31, 2024 ಅಥವಾ ಮುಂದಿನ ಆದೇಶದವರೆಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. 

ಜಾರ್ಖಂಡ್ ಕೇಡರ್ ನ 1988ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಪ್ರಧಾನ್, ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ-ಎನ್ ಡಿಆರ್ ಎಫ್  ಮಹಾನಿರ್ದೇಶಕ ಜವಾಬ್ದಾರಿ ಹೊಂದಿದ್ದರೂ ಹೆಚ್ಚುವರಿಯಾಗಿ ಎನ್ ಸಿಬಿ ಮುಖ್ಯಸ್ಥ ಸ್ಥಾನವನ್ನು ನೀಡಲಾಗಿದೆ. 

ರಾಕೇಶ್ ಅಸ್ಥಾನ ದೆಹಲಿ ಪೊಲೀಸ್ ಕಮೀಷನರ್ ಆಗಿ ನೇಮಕವಾದ ನಂತರ ಎನ್ ಸಿಬಿ ಮಹಾನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.  ಪೂರ್ಣ ಅವಧಿ ಆಧಾರದ ಮೇಲೆ ಎನ್ ಸಿಬಿ ಮುಖ್ಯಸ್ಥರಾಗಿ ಪ್ರಧಾನ್ ಅವರನ್ನು ಸಂಪುಟದ ನೇಮಕಾತಿ ಸಮಿತಿ ಬುಧವಾರ ನೇಮಕ ಮಾಡಿ ಆದೇಶಿಸಿದೆ. 

Advertisement

Advertisement

ಎನ್ ಡಿಆರ್ ಎಫ್ ಮಹಾನಿರ್ದೇಶಕ ಹುದ್ದೆಯನ್ನು ಕೂಡಲೇ ತೊರೆಯುವಂತೆ ಕೇಂದ್ರ ಗೃಹ ಸಚಿವಾಲಯ ಪ್ರಧಾನ್ ಅವರಿಗೆ ಮನವಿ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments