ದೇಶ

ಡೇಟಾ ಸುರಕ್ಷತೆ ಮಸೂದೆಗೆ ತ್ವರಿತವಾಗಿ ಅಂಗೀಕಾರ ನೀಡುವ ಅಗತ್ಯವಿದೆ: ಸಿಡಿಎಸ್ ಬಿಪಿನ್ ರಾವತ್

Srinivas Rao BV

ತಿರುವನಂತಪುರಂ: ಡೇಟಾ ಸುರಕ್ಷತೆ ಮಸೂದೆಗೆ ತ್ವರಿತವಾಗಿ ಅಂಗೀಕಾರ ನೀಡುವ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

2019 ರಲ್ಲಿ ಸಂಸತ್ ನಲ್ಲಿ ಡೇಟಾ ಸುರಕ್ಷತೆ ಮಸೂದೆ ಮಂಡನೆಯಾಗಿತ್ತು. ಇತ್ತೀಚಿನ ವರ್ಚ್ಯುಯಲ್ ಜಗತ್ತಿನಲ್ಲಿ ಡೇಟಾ ಕಳ್ಳತನ ಸಾಮಾನ್ಯವಾಗಿದ್ದು, ಡೇಟಾ ಸುರಕ್ಷತೆ ಮಸೂದೆ ತ್ವರಿತವಾಗಿ ಅಂಗೀಕಾರವಾಗಬೇಕಿದೆ ಎಂದು ಹೇಳಿದ್ದಾರೆ.

ಕೇರಳ ಪೊಲೀಸರು ಆಯೋಜಿಸಿದ್ದ c0c0n ನ 14 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿರುವ ರಾವತ್, ನಮ್ಮ ಡಿಜಿಟಲ್ ಆಸ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ವಿವಿಧ ರಾಜ್ಯ ಸರ್ಕಾರಗಳ ಸೈಬರ್ ಭದ್ರತಾ ತಜ್ಞರ ಪ್ರಯತ್ನಗಳನ್ನು ಸಂಯೋಜಿಸಬೇಕು ಎಂದು ಹೇಳಿದ್ದಾರೆ. 

ಭಾರತಕ್ಕೆ ನಿರ್ದಿಷ್ಟವಾದ ಸೈಬರ್ ಭದ್ರತೆ ಕಾನೂನು ಇಲ್ಲ. ರಾಷ್ಟ್ರೀಯ ಮಟ್ಟದಲ್ಲಿ ವರ್ಚ್ಯುಯಲ್ ಸ್ಪೇಸ್ ನ್ನು ನಿರ್ವಹಣೆ ಮಾಡುವುದಕ್ಕಾಗಿ ಚೌಕಟ್ಟಿನ ಅಗತ್ಯವಿದೆ ಎಂದು ಬಿಪಿನ್ ರಾವತ್ ಹೇಳಿದ್ದಾರೆ. ಸರ್ಕಾರದ ಹಲವು ಏಜೆನ್ಸಿಗಳು ಸೈಬರ್ ಭದ್ರತೆಯೊಂದಿಗೆ ವ್ಯವಹರಿಸುತ್ತಿವೆ. ನಮ್ಮ ರಕ್ಷಣಾ ಸೇವೆಗಳಲ್ಲೂ ಸೈಬರ್ ತಜ್ಞರಿದ್ದಾರೆ ರಾಜ್ಯ ಪೊಲೀಸ್ ವಿಭಾಗದಲ್ಲಿ ಸೈಬರ್ ಸೆಲ್ ಗಳಿವೆ.

ತಮ್ಮ ವರ್ಚ್ಯುಯಲ್ ಭಾಷಣದಲ್ಲಿ ರಾವತ್ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗಿರುವ ಡಿಜಿಟಲ್ ಪೇಮೆಂತ್ ಗಳ ಬಗ್ಗೆಯೂ ಉಲ್ಲೇಖಿಸಿದ್ದು, ಇದರಿಂದಲೂ ಸಂಕೀರ್ಣವಾದ ಸೈಬರ್ ಕ್ರೈಮ್ ಗಳ ಹೆಚ್ಚಳವಾಗಿದೆ. ಐಟಿ ಕಾಯ್ದೆ 2000 ನ್ನು 2008 ರಲ್ಲಿ ತಿದ್ದುಪಡಿಯಾಗಿದ್ದ ಕಾಯ್ದೆಯನ್ನು ಮತ್ತೆ ಅಪ್ಡೇಟ್ ಮಾಡಬೇಕಾದ ಅಗತ್ಯವಿದೆ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಡೇಟಾ ರಕ್ಷಣೆ ಮತ್ತೊಂದು ಮಹತ್ವದ ವಿಷಯವಾಗಿದ್ದು, ಬಹುತೇಕ ರಾಷ್ಟ್ರಗಳು ಡೇಟಾ ರಕ್ಷಣೆ ಕನೂನುಗಳನ್ನು ಹೊಂದಿವೆ. ಅಂತೆಯೇ 2019 ರಲ್ಲಿ ಸಂಸತ್ ನಲ್ಲಿ ಮಂಡನೆಯಾಗಿದ್ದ  ಡೇಟಾ ಸುರಕ್ಷತೆ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸಬೇಕಿದೆ ಎಂದು ಹೇಳಿದ್ದಾರೆ.
 

SCROLL FOR NEXT