ದೇಶ

ಕೇರಳ: ತ್ರಿವಳಿ ತಲಾಕ್ ಹೇಳಲು ನಿರಾಕರಿಸಿದ ಯುವಕನಿಗೆ ಥಳಿತ

Nagaraja AB

ಕೇರಳ: ಮೂರು ಬಾರಿ ತಲಾಖ್  ಪದವನ್ನು ಉಚ್ಚರಿಸುವ ಮೂಲಕ ವಿಚ್ಛೇದನದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ಪತ್ನಿಯ ಸಂಬಂಧಿಕರು 30 ವರ್ಷದ ವ್ಯಕ್ತಿಯನ್ನು ಕ್ರೂರವಾಗಿ ಥಳಿಸಿರುವ ಘಟನೆ ಮಲ್ಲಪುರಂ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಆರು ಮಂದಿಯನ್ನು ಕೊಟ್ಟಕ್ಕಲ್ ಪೊಲೀಸರು ಬಂಧಿಸಿದ್ದಾರೆ.

ಸುಮಾರು ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ಪತ್ನಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ತ್ರಿವಳಿ ತಲಾಖ್ ಹೇಳಲು ನಿರಾಕರಿಸಿದ್ದಕ್ಕಾಗಿ ಅಬ್ದುಲ್ ಅಸೀಬ್ ಗೆ ಆತನ ಮಾವ ಹಾಗೂ ಪತ್ನಿಯ ಚಿಕ್ಕಪ್ಪಂದಿರು ಹಲ್ಲೆ ನಡೆಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಅಸೀಬ್ ಅನುಮಾನಾಸ್ಪದ ಸ್ವಭಾವದವನಾಗಿದ್ದು, ಮಾದಕ ದ್ರವ್ಯ ಸೇವಿಸುವ ಅಭ್ಯಾಸವನ್ನು ಹೊಂದಿದ್ದಾನೆ ಎಂದು ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಅವರು ವಿಚ್ಛೇದನಕ್ಕಿಂತ ಏನನ್ನೂ ಕೇಳಿರಲಿಲ್ಲ.  ಆದರೆ ಅವರು ನಿರಾಕರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ನಿನ್ನೆ ಆತನ ಕಚೇರಿಗೆ ಆಗಮಿಸಿ ಅಸೀಬ್ ನನ್ನು ಬಲವಂತವಾಗಿ ಆತನ ಪತ್ನಿಯ ಮನೆಗೆ ಕರೆದುಕೊಂಡು ಹೋಗಿದ್ದಾರೆ.  ಸಾಂಕೇತಿಕವಾಗಿ ಪತ್ನಿಗೆ ವಿಚ್ಛೇದನ ನೀಡುವ ಭಾಗವಾಗಿ ತ್ರಿವಳಿ ತಲಾಖ್ ಹೇಳಬೇಕು ಎಂದು ಒತ್ತಾಯಿಸಿದಾಗ ಅವರ ಬೇಡಿಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾನೆ.  ನಂತರ ಅವರು ಆತನನ್ನು ಥಳಿಸಿದ್ದಾರೆ. ಮೂಗು ಸೇರಿದಂತೆ ಮತ್ತಿತರ ಕಡೆಗಳಲ್ಲಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT