ದೇಶ

'ಒಂದು ರಾಷ್ಟ್ರ, ಒಂದು ಶಾಸಕಾಂಗ ನಿಯಮ' ಪ್ರಸ್ತಾಪಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ

Lingaraj Badiger

ಶಿಮ್ಲಾ: 'ಒಂದು ರಾಷ್ಟ್ರ, ಒಂದು ಏಕರೂಪ ಶಾಸಕಾಂಗ ನಿಯಮಗಳು ಮತ್ತು ಕಾರ್ಯವಿಧಾನಗಳ' ಬಗ್ಗೆ ಪ್ರಸ್ತಾಪಿಸಿರುವ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು, ಇದು ದೇಶದ ಶಾಸಕಾಂಗಗಳನ್ನು ಹೆಚ್ಚು ಉತ್ಪಾದಕ ಮತ್ತು ಜನರಿಗೆ ಹೊಣೆಗಾರರನ್ನಾಗಿ ಮಾಡಲಿದೆ ಬುಧವಾರ ಹೇಳಿದ್ದಾರೆ.

ಶಿಮ್ಲಾದಲ್ಲಿ ನಡೆದ ಅಖಿಲ ಭಾರತ ಶಾಸನಸಭೆಗಳ ಅಧ್ಯಕ್ಷರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಓಂ ಬಿರ್ಲಾ ಅವರು, ಶಾಸನ ಸಭೆಗಳಲ್ಲಿ ನಡೆಯುತ್ತಿರುವ ಅಧಿವೇಶನಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಮತ್ತು ಕಾನೂನು ರಚನೆಯ ಬಗ್ಗೆ ಸಮರ್ಪಕ ಚರ್ಚೆ ನಡೆಯದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಈ ಎಲ್ಲಾ ರಾಜಕೀಯ ಪಕ್ಷಗಳು ಸಮಾಲೋಚಿಸಿ ಕೆಲವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ. ಈ ಮೂಲಕ ಶಾಸನಸಭೆಗಳ ಘನತೆಯನ್ನು ಉಳಿಸಬೇಕು ಎಂದು ಅವರು ಒತ್ತಿ ಹೇಳಿದರು.

ಜನರ ಹಕ್ಕುಗಳ ಪೂರಕವಾಗಿ ಶಾಸನಸಭೆಗಳು ತಮ್ಮ ಕಾರ್ಯವಿಧಾನ ಮತ್ತು ನಿಯಮಗಳನ್ನು ಪರಿಶೀಲಿಸಬೇಕು ಎಂದು ಓಂ ಬಿರ್ಲಾ ಅವರು ಕರೆ ನೀಡಿದರು.

ಎಲ್ಲಾ ಶಾಸನಸಭೆಗಳಲ್ಲಿ ಕಾನೂನು ಮತ್ತು ಕಾರ್ಯವಿಧಾನಗಳ ಏಕರೂಪತೆಗಾಗಿ ಮಾದರಿ ಡಾಕ್ಯೂಮೆಂಟ್ ಸಿದ್ಧಪಡಿಸಬೇಕು ಎಂದು ಅವರು ಹೇಳಿದರು.

ಸಾಮೂಹಿಕ ಸಂಕಲ್ಪದೊಂದಿಗೆ, ನಮ್ಮ ಸ್ವಾತಂತ್ರ್ಯದ 100 ವರ್ಷಗಳು ಪೂರ್ಣಗೊಂಡಾಗ, ಎಲ್ಲಾ ಶಾಸಕಾಂಗಗಳ ನಿಯಮಗಳು ಮತ್ತು ಕಾರ್ಯವಿಧಾನಗಳಲ್ಲಿ ಏಕರೂಪತೆ ಇರಬೇಕು ಮತ್ತು ಶಾಸಕಾಂಗ ಸಂಸ್ಥೆಗಳ ಕಾರ್ಯವು ಜನರ ಆಶಯಗಳಿಗೆ ಅನುಗುಣವಾಗಿರಬೇಕು ಮತ್ತು ಅಂತಹ ಮಾದರಿ ಡಾಕ್ಯೂಮೆಂಟ್ ಸಿದ್ಧಪಡಿಸಬೇಕು ಎಂದು ಬಿರ್ಲಾ ಹೇಳಿದ್ದಾರೆ.

SCROLL FOR NEXT