ಅಮೆಜಾನ್ 
ದೇಶ

ಅಮೆಜಾನ್ ನಲ್ಲಿ ಡ್ರಗ್ಸ್? ಬೆಚ್ಚಿಬೀಳಿಸುವ ವಿಷಯ ಬಾಯ್ಬಿಟ್ಟ ಬಂಧಿತರು; ಈಗಾಗಲೆ 1.1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಮಾರಾಟ!

ಮಧ್ಯಪ್ರದೇಶದ ಭಿಂಡ್ ನ ಢಾಬಾದಲ್ಲಿ ಪತ್ತೆಯಾಗಿರುವ 20 ಕೆಜಿ ಮರಿಜುನಾ (Marijuana - ಒಂದು ರೀತಿಯ ಗಾಂಜಾ ಪದಾರ್ಥ) ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಆರೋಪಿಗಳನ್ನು 3 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಅಲ್ಲದೆ, ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಭಿಂಡ್: ಮಧ್ಯಪ್ರದೇಶದ ಭಿಂಡ್ ನ ಢಾಬಾದಲ್ಲಿ ಪತ್ತೆಯಾಗಿರುವ 20 ಕೆಜಿ ಮರಿಜುನಾ (Marijuana - ಒಂದು ರೀತಿಯ ಗಾಂಜಾ ಪದಾರ್ಥ) ಸಂಬಂಧಿಸಿದಂತೆ ತನಿಖೆ ಚುರುಕು ಪಡೆದುಕೊಂಡಿದೆ. ಇಬ್ಬರು ಆರೋಪಿಗಳನ್ನು 3 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ಅಲ್ಲದೆ, ಇ-ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಎಸ್ ಪಿ ಮನೋಜ್ ಕುಮಾರ್ ಸಿಂಗ್ ಅಮೆಜಾನ್ ಅಧಿಕಾರಿಗಳ ಜೊತೆಗೆ ನಡೆಸಿದ ಚರ್ಚೆ ಬಗ್ಗೆ ಮಾಹಿತಿ ನೀಡಿದ ಅವರು, ಅಧಿಕಾರಿಗಳು ಯಾವುದೇ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿಲ್ಲ. ಆದ್ರೆ, ತನಿಖೆ ಮತ್ತು ಅಗತ್ಯವಿರುವ ಮಾಹಿತಿಗಾಗಿ ಇಮೇಲ್ ಕಳಿಸುವಂತೆ ಸೂಚಿಸಿದ್ದರು. ಅದರಂತೆ ಅಮೆಜಾನ್ ಕಂಪನಿ ಸಿಬ್ಬಂದಿಗೆ ಇಮೇಲ್ ರವಾನಿಸಿದ್ದೇವೆ ಅಂತಾ ತಿಳಿಸಿದರು.

ಢಾಬಾದಲ್ಲಿ ಬಂಧಿಯಾಗಿರುವ ಇಬ್ಬರು ಆರೋಪಿಗಳನ್ನು ಸೂರಜ್ ಪಾವೈ ಮತ್ತು ವಿಜೇಂದ್ರ ಸಿಂಗ್ ತೋಮರ್ ಎಂದು ಗುರುತಿಸಲಾಗಿದೆ. ಗುಜರಾತ್ ನ ಅಹಮದಾಬಾದ್ ನ ಬಾಬು ಟೆಕ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ಸೂಪರ್ ನ್ಯಾಚುರಲ್ ಡ್ರೈ ಲೀಫ್ ಹೆಸರಲ್ಲಿ ಅಮೆಜಾನ್ ವೆಬ್ ಸೈಟ್ ಮೂಲಕ ಈ ಗಾಂಜಾ ಮಾರಾಟ ಮಾಡಲಾಗಿದೆ ಎಂದು ಆರೋಪಿಗಳು ತಿಳಿಸಿದ್ದಾರೆ ಅಂತಾ ಪೊಲೀಸರು ಹೇಳಿದ್ದಾರೆ. ವೆಬ್ ಸೈಟ್ ನಲ್ಲಿ 2 ಕಿಲೋ ಗ್ರಾಂ ಎಲೆಗಳ ಬೆಲೆ ₹ 180 ರೂಪಾಯಿ ಆಗಿದೆ. 1 ಟನ್ ಗಾಂಜಾವನ್ನು ಈಗಾಗಲೇ ಇ-ಕಾಮರ್ಸ್ ವೆಬ್ ಸೈಟ್ ಮೂಲಕ ₹ 1.1 ಕೋಟಿಗೆ ಮಾರಾಟ ಮಾಡಲಾಗಿದೆ.

ಕಳೆದ ಏಳು ತಿಂಗಳಲ್ಲಿ ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ 384 ಆರ್ಡರ್‌ಗಳ ಮೂಲಕ 768 ಕೆಜಿ ಗಾಂಜಾವನ್ನು ಸರಬರಾಜು ಮಾಡಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಎಲ್ಲ ರೀತಿಯ ಪಾವತಿಗಳನ್ನು ಕೇವಲ ಒಂದೇ UPI ಐಡಿ ಮೂಲಕ ಮಾಡಿರುವುದು ಪೊಲೀಸರನ್ನು ಬೆಚ್ಚಿಬೀಳಿಸಿದೆ.

ಅಮೆಜಾನ್ ಕಂಪನಿಯಿಂದ ಮಾರಾಟವಾದ ವಸ್ತುವಿನ ಮೇಲೆ ಅಂದರೆ 180 ರೂಪಾಯಿಯಲ್ಲಿ 66.66% ಪಾಲನ್ನು ಪಡೆದುಕೊಳ್ಳುತ್ತದೆ. ಆದ್ದರಿಂದ ಕಂಪನಿಯು ಇದರಲ್ಲಿ ಲಾಭ ಗಳಿಸುತ್ತಾರೆ ಅಂತಾ ತನಿಖಾಧಿರಿಯೊಬ್ಬರು ತಿಳಿಸಿದ್ದಾರೆ.

ತನಿಖಾ ಹಂತದಲ್ಲಿ ಕಂಪನಿಯ ಉದ್ಯೋಗಿ ಭಾಗಿಯಾಗಿರುವುದು ಕಂಡುಬಂದರೆ ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಸ್‌ಪಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇ-ಕಾಮರ್ಸ್ ಸೈಟ್‌ನಲ್ಲಿ ಆಪಾದಿತ ಗಾಂಜಾ ಮಾರಾಟಕ್ಕಾಗಿ ಅಮೆಜಾನ್ ವಿರುದ್ಧ ಎನ್‌ಸಿಬಿ ಕ್ರಮಕ್ಕೆ ವ್ಯಾಪಾರಿಗಳ ಸಂಘ ಒತ್ತಾಯಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT