ಜಯಂತ್ ಚೌಧರಿ-ಅಖಿಲೇಶ್ ಯಾದವ್ 
ದೇಶ

ಬಿಜೆಪಿಗೆ ಟಕ್ಕರ್; ಎಸ್​ಪಿ-ಆರ್​​​​ಎಲ್​ಡಿ ನಡುವೆ ಚುನಾವಣಾ ಪೂರ್ವ ಮೈತ್ರಿ ದೃಢ: ಅಖಿಲೇಶ್ ಜೊತೆ ಜಯಂತ್ ಫೋಟೋ ವೈರಲ್

ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಮತ್ತು ನಡುವೆ ಚುನಾವಣಾ ಪೂರ್ವ ಮೈತ್ರಿ ದೃಢಪಟ್ಟಿದೆ ಎಂದು ಆರ್ ಎಲ್ ಡಿ ಅಧ್ಯಕ್ಷ ಜಯಂತ್ ಸಿಂಗ್ ಚೌಧರಿ ತಿಳಿಸಿದ್ದಾರೆ.

ಲಖನೌ: ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ) ಮತ್ತು ನಡುವೆ ಚುನಾವಣಾ ಪೂರ್ವ ಮೈತ್ರಿ ದೃಢಪಟ್ಟಿದೆ ಎಂದು ಆರ್ ಎಲ್ ಡಿ ಅಧ್ಯಕ್ಷ ಜಯಂತ್ ಸಿಂಗ್ ಚೌಧರಿ ತಿಳಿಸಿದ್ದಾರೆ.
 
ಉಭಯ ನಾಯಕರು ಲಖನೌದಲ್ಲಿ ಭೇಟಿಯಾದ ನಂತರ, ಚೌಧರಿ ಅವರು ಶೀಘ್ರದಲ್ಲೇ ಔಪಚಾರಿಕ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಅಖಿಲೇಶ್ ಯಾದವ್ ಅವರೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ಅಂತಿಮ ಹಂತದಲ್ಲಿದೆ . ಹಾಗೆ ಆರ್‌ಎಲ್‌ಡಿ ಮುಖ್ಯಸ್ಥರು ಬಿಜೆಪಿಯೊಂದಿಗಿನ ಯಾವುದೇ ಹೊಂದಾಣಿಕೆಯನ್ನು ಬಲವಾಗಿ ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸಂಜೆ, ಇಬ್ಬರೂ ನಾಯಕರು ಪರಸ್ಪರರೊಂದಿಗಿನ ಚಿತ್ರಗಳನ್ನು ಟ್ವೀಟ್ ಮಾಡಿದ್ದು, ಶೀಘ್ರದಲ್ಲೇ ಔಪಚಾರಿಕ ಘೋಷಣೆಯನ್ನು ನಿರೀಕ್ಷಿಸಬಹುದು ಎಂದು ಸುಳಿವು ನೀಡಿದ್ದಾರೆ.

ಮೂಲಗಳ ಪ್ರಕಾರ, ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಆರ್‌ಎಲ್‌ಡಿ ಮತ್ತು ಎಸ್‌ಪಿ ನಡುವೆ ಒಪ್ಪಂದಕ್ಕೆ ಬರಲಾಗಿದೆ. ಬುಧವಾರ ಇಬ್ಬರೂ ನಾಯಕರು ಮೈತ್ರಿ ಘೋಷಣೆ ಮಾಡಬಹುದು. ಜಯಂತ್ 50 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್‌ಪಿ ಮುಖ್ಯಸ್ಥರು ತಮ್ಮ ಅಂಶಗಳನ್ನು ಒಪ್ಪಿಕೊಂಡಂತೆ ತೋರುತ್ತಿದೆ.

ಇವರಿಬ್ಬರ ಮೈತ್ರಿ ಬಗ್ಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಆದರೆ ಕೆಲವು ಸೀಟುಗಳು ಹಂಚಿಕೆ ಸಂಬಂಧ ಒಮ್ಮತ ಮೂಡಿಲ್ಲ. ಪಶ್ಚಿಮ ಉತ್ತರ ಪ್ರದೇಶದಲ್ಲಿ ನಾಲ್ಕರಿಂದ ಐದು ಸ್ಥಾನಗಳಿದ್ದು, ಎರಡೂ ಪಕ್ಷಗಳು ಸೀಟಿಗಾಗಿ ಪಟ್ಟುಹಿಡಿದಿವೆ. ಪ್ರಮುಖವಾಗಿ ಚಾರ್ತಾವಾಲ್ ವಿಧಾನಸಭಾ ಸ್ಥಾನ. ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎರಡೂ ಪಕ್ಷಗಳು ಹಠ ಹಿಡಿದಿವೆ. ಈ ಕ್ಷೇತ್ರದಿಂದ ಹರೇಂದ್ರ ಮಲಿಕ್‌ಗೆ ಟಿಕೆಟ್ ನೀಡಲು ಅಖಿಲೇಶ್ ಬಯಸಿದ್ದು, ಸ್ವತಃ ಜಯಂತ್ ಈ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಉತ್ಸುಕರಾಗಿದ್ದಾರೆ. ಹರೇಂದ್ರ ಇತ್ತೀಚೆಗಷ್ಟೇ ಎಸ್ಪಿಗೆ ಸೇರ್ಪಡೆಗೊಂಡಿದ್ದರು. ಅವರೇ ಚಾರ್ತಾವಾಲ್ ವಿಧಾನಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷಗಳಿಗೆ ಗರಿಷ್ಠ 50ರಿಂದ 55 ಸ್ಥಾನಗಳನ್ನು ನೀಡಲು ಎಸ್‌ಪಿ ಒಪ್ಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆರ್‌ಎಲ್‌ಡಿ ಹೊರತುಪಡಿಸಿ, ಓಂ ಪ್ರಕಾಶ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಮತ್ತು ಇತರ ಸಣ್ಣ ಪಕ್ಷಗಳು ಸಹ ಭಾಗಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ, ಆರ್‌ಎಲ್‌ಡಿ ಪಶ್ಚಿಮ ಉತ್ತರ ಪ್ರದೇಶದಲ್ಲಿ 25 ಸ್ಥಾನಗಳನ್ನು ಮತ್ತು ಪೂರ್ವಾಂಚಲ್‌ನಲ್ಲಿ ಹತ್ತಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಯುಪಿಯಲ್ಲಿ ಎಸ್‌ಪಿಯೊಂದಿಗೆ ಬಿಜೆಪಿಯ ಸ್ಪರ್ಧೆಯನ್ನು ಪರಿಗಣಿಸಲಾಗುತ್ತಿದೆ. ಎರಡೂ ಪಕ್ಷಗಳು ಪರಸ್ಪರ ಸೋಲಿಸಲು ತಮ್ಮ ಕುಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಬಿಎಸ್ಪಿ ಮತ್ತು ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿಯಲಿವೆ. ಬಿಎಸ್‌ಪಿಯ ಮಾಯಾವತಿ ಕೂಡ ಸದ್ಯಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡುವುದನ್ನು ನಿಲ್ಲಿಸಿದ್ದಾರೆ. ಇನ್ನು ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಪಕ್ಷವನ್ನು ಗೆಲ್ಲಿಸುವ ಪಣತೊಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT