ಎರಡು ಮರಣ ಪ್ರಮಾಣಪತ್ರ 
ದೇಶ

ಸಮೀರ್ ವಾಂಖೆಡೆ ತಾಯಿಯ ಎರಡು ಮರಣ ಪ್ರಮಾಣಪತ್ರದಲ್ಲಿ ಮುಸ್ಲಿಂ, ಹಿಂದೂ ಎಂದು ನಮೂದಿಸಲಾಗಿದೆ: ನವಾಬ್ ಮಲಿಕ್

ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸಸುರಿಮಳೆ ಮಾಡುತ್ತಿರುವ ಮಹಾರಾಷ್ಟ್ರ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು, ಈಗ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.

ಮುಂಬೈ: ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಆರೋಪಗಳ ಸಸುರಿಮಳೆ ಮಾಡುತ್ತಿರುವ ಮಹಾರಾಷ್ಟ್ರ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು, ಈಗ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. 

ಸಮೀರ್ ವಾಂಖೆಡೆ ತನ್ನ ತಾಯಿಯ ಮರಣ ಪ್ರಮಾಣ ಪತ್ರವನ್ನು ಪೋರ್ಜರಿ ಮಾಡಿದ್ದಾರೆ ಎಂದು ನವಾಬ್ ಮಲಿಕ್ ಅವರು ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.

ಸಮೀರ್ ವಾಂಖೆಡೆಯ ತಾಯಿ ಜಾಹಿದಾ ದಾವೂದ್ ವಾಂಖೆಡೆಯ ಎರಡು ಮರಣ ಪ್ರಮಾಣಪತ್ರಗಳಿವೆ. ಎರಡೂ ಪ್ರಮಾಣ ಪತ್ರಗಳಲ್ಲಿ ಬೇರೆ ಬೇರೆ ಧರ್ಮಗಳ ಉಲ್ಲೇಖವಿದೆ ಎಂದು ನವಾಬ್ ಮಲಿಕ್ ಸಾಕ್ಷಿ ಸಮೇತ ಟ್ವೀಟ್ ಮಾಡಿದ್ದಾರೆ.

ಅಂತ್ಯಕ್ರಿಯೆಗೆ ಮುಸ್ಲಿಂ ಮತ್ತು ಅಧಿಕೃತ ದಾಖಲೆಗಾಗಿ ಹಿಂದೂ? ದಾವೂದ್ ಜ್ಞಾನದೇವ್ ಧನ್ಯ" ಎಂದು ಟ್ವೀಟ್ ರಲ್ಲಿ ನಲ್ಲಿ ಬರೆದುಕೊಂಡು ನವಾಬ್ ಮಲಿಕ್ ವ್ಯಂಗ್ಯವಾಡಿದ್ದಾರೆ.

ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧನದ ನಂತರ ನವಾಬ್ ಮಲಿಕ್, ಸಮೀರ್ ವಾಂಖೆಡೆ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಪ್ರಕರಣ ನವಾಬ್ ಮಲಿಕ್, ಸಮೀರ್ ವಾಂಖೆಡೆ ವಿರುದ್ಧ ಮಾತ್ರವಲ್ಲದೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ನಿನ್ನೆಯಷ್ಟೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

ಭಾರತ ತಂಡಕ್ಕೆ ಭಾರಿ ಆಘಾತ; ಸ್ಟಾರ್ ಆಟಗಾರನ ಮೂಳೆ ಮುರಿತ, ದೀರ್ಘಕಾಲ ಕ್ರಿಕೆಟ್‌ನಿಂದ ದೂರ!

EVM Survey: ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುತ್ತಿರುವುದು ವಿಷಾದನೀಯ - ಸಿಎಂ ಸಿದ್ದರಾಮಯ್ಯ

SCROLL FOR NEXT