ದೇಶ

ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಗುಂಡಿನ ಚಕಮಕಿ: ಪಾಕ್ ಉಗ್ರನ ಹತ್ಯೆ, ಶಸ್ತ್ರಾಸ್ತ್ರ ವಶ 

Sumana Upadhyaya

ರಜೌರಿ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಓರ್ವ ಪಾಕಿಸ್ತಾನ ಉಗ್ರ ಹತನಾಗಿದ್ದಾನೆ. 

ಜಮ್ಮುವಿನ ರಜೌರಿಯ ಬಿಂಬೆರ್ ಗಲಿಯಲ್ಲಿ ಕಳೆದ ರಾತ್ರಿ ಉಗ್ರ ಒಳನುಸುಳಲು ಯತ್ನಿಸುತ್ತಿದ್ದ ವೇಳೆ ಸೇನಾಪಡೆ ಯೋಧರು ಗುಂಡು ಹಾರಿಸಿ ಹೊಡೆದುರುಳಿಸಿದ್ದಾರೆ. ಆತನ ಬಳಿಯಿದ್ದ ಆಯುಧ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.

SCROLL FOR NEXT