ದೇಶ

ಸುಲಿಗೆ ಪ್ರಕರಣ: ಥಾಣೆ ಪೊಲೀಸರ ಮುಂದೆ ಪರಮ್ ಬಿರ್ ಸಿಂಗ್ ಹಾಜರು; ಸೋಮವಾರ ತನಿಖಾ ಆಯೋಗದಿಂದ ವಿಚಾರಣೆ

Srinivas Rao BV

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ವಿರುದ್ಧ ಭ್ರಷ್ಟಾಚಾರದ ಮಾಡಿದ್ದ ಹಿರಿಯ ಪೊಲಿಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಆರೋಪವನ್ನು ತನಿಖೆ ನಡೆಸುತ್ತಿರುವ ಏಕಸದಸ್ಯ ಆಯೋಗ ನ.29 ರಂದು ತನ್ನೆದುರು ಹಾಜರಾಗುವಂತೆ ಸಿಂಗ್ ಗೆ ಸೂಚನೆ ನೀಡಿದೆ. 

ದೇಶ್ ಮುಖ್ ವಿರುದ್ಧದ ಪ್ರಕರಣದ ತನಿಖೆ ನಡೆಸುವುದಕ್ಕಾಗಿ ಕೆಯು ಚಂಡಿವಾಲ್ ಆಯೋಗವನ್ನು ಈ ವರ್ಷದ ಮಾರ್ಚ್ ನಲ್ಲಿ ರಚಿಸಲಾಗಿತ್ತು. ಇದಕ್ಕೂ ಮುನ್ನ ಗುರುವಾರದಂದು ಸಿಂಗ್ ಗೆ ಎಚ್ಚರಿಕೆ ನೀಡಿದ್ದ ಆಯೋಗ, ಒಂದು ವೇಳೆ ಪರಮ್ ಬಿರ್ ಸಿಂಗ್ ಆಯೋಗದ ಎದುರು ಹಾಜರಾಗದೇ ಇದ್ದಲ್ಲಿ, ಅವರಿಗೆ ವಾರೆಂಟ್ ಜಾರಿಗೊಳಿಸುವುದಾಗಿ ಹೇಳಿತ್ತು.

ಈ ವಿಷಯ ವಿಚಾರಣೆಗೆ ಬಂದಾಗ ಸಿಂಗ್ ಪರ ವಕೀಲರು ಪರಮ್ ಬಿರ್ ಸಿಂಗ್ ಅವರು ಥಾಣೆಯಲ್ಲಿ ಮತ್ತೊಂದು ಪ್ರಕರಣ ಎದುರಿಸುತ್ತಿರುವುದರಿಂದ ಅವರು ಆಯೋಗ ಹೇಳಿದ ದಿನದಂದು ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶನಿವಾರದಂದು ಹಾಜರಾಗಲಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಯೋಗ ನ.29 (ಸೋಮವಾರ) ರಂದು ಹಾಜರಾಗುವಂತೆ ಸೂಚನೆ ನೀಡಿದೆ. 

ತನಿಖಾ ಆಯೋಗದ ಎದುರು ಹಾಜರಾಗುವುದಕ್ಕೆ ವಿಫಲರಾಗಿದ್ದ ಸಿಂಗ್ ಗೆ ಆಯೋಗ ಹಲವು ಬಾರಿ ದಂಡ ವಿಧಿಸಿ ವಾರೆಂಟ್ ನ್ನೂ ಜಾರಿಗೊಳಿಸಿತ್ತು.

ಸುಲಿಗೆ ಪ್ರಕರಣ: ಥಾಣೆ ಪೊಲೀಸರ ಮುಂದೆ ತನಿಖೆಗೆ ಹಾಜರಾದ ಪರಮ್ ಬೀರ್ ಸಿಂಗ್

ಪ್ರಕರಣದ ತನಿಖೆಗಾಗಿ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಶುಕ್ರವಾರ ಥಾಣೆ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಬೆಳಗ್ಗೆ 10:30 ರ ಸುಮಾರಿಗೆ ಸಿಂಗ್ ತಮ್ಮ ವಕೀಲರೊಂದಿಗೆ ಥಾಣೆ ನಗರ ಪೊಲೀಸ್ ಠಾಣೆಗೆ ಬಂದಿದ್ದಾರೆ. ತನಿಖಾ ತಂಡವು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದು, ವಲಯ ಡಿಸಿಪಿ ಅವಿನಾಶ ಅಂಬೂರೆ ಪೊಲೀಸ್ ಠಾಣೆಯಲ್ಲಿ ಹಾಜರಿದ್ದರು. ಈ ವರ್ಷದ ಜುಲೈನಲ್ಲಿ ಬಿಲ್ಡರ್ ಕೇತನ್ ತನ್ನಾ ಅವರು ನೀಡಿದ ದೂರಿನ ಆಧಾರದ ಮೇಲೆ ಸಿಂಗ್ ಮತ್ತು ಆರು ಪೊಲೀಸ್ ಅಧಿಕಾರಿಗಳು ಸೇರಿದಂತೆ 28 ಅಧಿಕಾರಿಗಳ ವಿರುದ್ಧ ಸುಲಿಗೆ ಪ್ರಕರಣವನ್ನು ಥಾಣೆ ಪೊಲೀಸರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಸಿಂಗ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಪರಾರಿಯಾಗಿರುವ ಸಿಂಗ್, ಹಲವು ತಿಂಗಳುಗಳ ಕಾಲ ಅಜ್ಞಾತವಾಸದಲ್ಲಿದ್ದರು. ಗುರುವಾರ ಮುಂಬೈಗೆ ಬಂದಿಳಿದಿದ್ದಾರೆ. ಅವರು ಬಂದ ನಂತರ, ಮುಂಬೈ ಪೊಲೀಸರ ಅಪರಾಧ ವಿಭಾಗವು ಪ್ರತ್ಯೇಕ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಸಿಂಗ್ ಮಹಾರಾಷ್ಟ್ರದಲ್ಲಿ ಒಟ್ಟು ಐದು ಸುಲಿಗೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಇಬ್ಬರು ಬಂಧಿತರಾಗಿದ್ದು, ಒಬ್ಬರು ಎರಡು ದಿನಗಳ ಹಿಂದೆ ನ್ಯಾಯಾಲಯವೊಂದರಿಂದ ಜಾಮೀನು ಪಡೆದಿದ್ದರು. ಪರಮ್‌ ಬೀರ್‌ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ ಐದು ಸುಲಿಗೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣಗಳು ಥಾಣೆಯಲ್ಲಿವೆ.

SCROLL FOR NEXT