ದೇಶ

ಟೊಮ್ಯಾಟೋ ದರ ಈಗಲೇ ಇಳಿಯಲ್ಲ, ಇನ್ನೂ 2 ತಿಂಗಳು ಹೀಗೆಯೇ ಇರಲಿದೆ: Crisil ಸಂಶೋಧನೆ

Srinivas Rao BV

ಮುಂಬೈ: ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ತರಕಾರಿಗಳ ಬೆಲೆ ಏರಿಕೆ ಮುಂದುವರೆದಿದ್ದು, ಟೊಮ್ಯಾಟೊ ದರ ಕನಿಷ್ಟ ಇನ್ನು 2 ತಿಂಗಳು ಏರುಗತಿಯಲ್ಲೇ ಇರಲಿದೆ. 

ಕ್ರಿಸಿಲ್ (Crisil) ಸಂಶೋಧನೆಯಲ್ಲಿ ಈ ಮಾಹಿತಿ ಲಭ್ಯವಾಗಿದ್ದು ಟೊಮ್ಯಾಟೋ ಬೆಳೆಯುವ ಪ್ರಮುಖವಾಗಿರುವ ರಾಜ್ಯವಾಗಿರುವ ಕರ್ನಾಟಕದಲ್ಲಿಯೂ ಕೊರತೆ ಉಂಟಾಗಿದ್ದು ಮಹಾರಾಷ್ಟ್ರದ ನಾಶಿಕ್ ನಿಂದ ತರಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. 

ಹೆಚ್ಚಿನ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೊಳಗಾಗಿದೆ. ರಾಜ್ಯದಲ್ಲಿ ವಾಡಿಕೆಗಿಂತಲೂ ಶೇ.105 ರಷ್ಟು ಮಳೆಯಾಗಿದ್ದು, ಆಂಧ್ರಪ್ರದೇಶದಲ್ಲಿ (ಶೇ.40) ಮಹಾರಾಷ್ಟ್ರದಲ್ಲಿ (ಶೇ.22 ರಷ್ಟು ಹೆಚ್ಚು ಮಳೆಯಾಗಿದೆ) ಈ ಭಾಗಗಳು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಟೊಮ್ಯಾಟೋಗೆ ಪ್ರಮುಖ ಪೂರೈಕೆದಾರ ರಾಜ್ಯಗಳಾಗಿವೆ.

ನ.25 ವರೆಗಿನ ಅಂಕಿ-ಅಂಶಗಳ ಪ್ರಕಾರ ಟೊಮ್ಯಾಟೋ ದರ ಶೇ.142 ರಷ್ಟು ಏರಿಕೆ ಕಂಡಿದ್ದು, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿನ ಬೆಳೆಗಳು ಮಾರುಕಟ್ಟೆ ತಲುಪುವವರೆಗೂ ಇನ್ನೂ ಎರಡು ತಿಂಗಳುಗಳ ಕಾಲ ಇದೇ ರೀತಿ ಏರುಗತಿಯಲ್ಲಿಯೇ ಇರಲಿದೆ ಎಂದು ಕ್ರಿಸಿಲ್ ಸಂಶೋಧನೆ  ಹೇಳಿದೆ.

SCROLL FOR NEXT