ಸಾಂದರ್ಭಿಕ ಚಿತ್ರ 
ದೇಶ

'ಓಮಿಕ್ರಾನ್ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು': ಐಸಿಎಂಆರ್ ಉನ್ನತ ವಿಜ್ಞಾನಿ

ಇತರ ದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರದಲ್ಲಿ ಜೀನೋಮಿಕ್ ವ್ಯತ್ಯಾಸಗಳು ಮತ್ತು ರಚನಾತ್ಮಕ ಬದಲಾವಣೆಗಳು ವರದಿಯಾಗಿವೆ. ಆದರೆ ಈ ಬದಲಾವಣೆಗಳು ಹೆಚ್ಚಿನ ಪ್ರಸರಣವನ್ನು ಹೊಂದಿವೆಯೇ...

ನವದೆಹಲಿ: ಇತರ ದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರದಲ್ಲಿ ಜೀನೋಮಿಕ್ ವ್ಯತ್ಯಾಸಗಳು ಮತ್ತು ರಚನಾತ್ಮಕ ಬದಲಾವಣೆಗಳು ವರದಿಯಾಗಿವೆ. ಆದರೆ ಈ ಬದಲಾವಣೆಗಳು ಹೆಚ್ಚಿನ ಪ್ರಸರಣವನ್ನು ಹೊಂದಿವೆಯೇ ಅಥವಾ ಲಸಿಕೆಗಳನ್ನು ನಿಷ್ಪರಿಣಾಮಕಾರಿಯಾಗಿಸುತ್ತದೆಯೇ ಎಂಬುದು ಇನ್ನೂ ಪರೀಕ್ಷೆಯಲ್ಲಿದೆ ಎಂದು ಐಸಿಎಂಆರ್ ಹಿರಿಯ ವಿಜ್ಞಾನಿ ಸಮೀರನ್ ಪಾಂಡಾ ಅವರು ಶನಿವಾರ ಹೇಳಿದ್ದಾರೆ.

"ಹೊಸ ಕೊರೋನಾ ವೈರಸ್ ರೂಪಾಂತರ ಬಿ.1.1.529, ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು 'ಒಮಿಕ್ರಾನ್' ಎಂದು ಹೆಸರಿಸಿದೆ. ಆತಂಕಕಾರಿಯಾಗಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ ವಿಜ್ಞಾನಿಗಳು ವೈರಸ್ ಅನ್ನು ಲಸಿಕೆಗಳಿಗೆ ಹೆಚ್ಚು ಪ್ರತಿರೋಧಕವಾಗಿಸಬಹುದು ಎಂದು ಹೇಳಿದ್ದಾರೆ. ಈ ವೈರಸ್ ಹೆಚ್ಚು ತೀವ್ರವಾದ ರೋಗ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಈ ರೂಪಾಂತರವು ಒಟ್ಟಾರೆಯಾಗಿ 50 ರೂಪಾಂತರಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

"ಆದಾಗ್ಯೂ, ಈ ಹೊಸ ರೂಪಾಂತರದ ಹೊರಹೊಮ್ಮುವಿಕೆಯು ಜನಸಂಖ್ಯೆಯ ಮಟ್ಟದಲ್ಲಿ ಹೇಗೆ ವಿಕಸನಗೊಳ್ಳುತ್ತದೆ ಮತ್ತು ಆಟವಾಡುತ್ತದೆ ಎಂಬುದನ್ನು ಲೆಕ್ಕಾಚಾರ ಮಾಡಲು ನಾವು ಕಾದು ನೋಡಬೇಕು" ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಎಪಿಡೆಮಿಯಾಲಜಿ ಮತ್ತು ಕಮ್ಯುನಿಕಬಲ್ ಡಿಸೀಸ್ ವಿಭಾಗದ ಮುಖ್ಯಸ್ಥರಾಗಿರುವ ಸಮೀರನ್ ಪಾಂಡಾ ಅವರು ತಿಳಿಸಿದ್ದಾರೆ.

ದೇಶದಲ್ಲಿ ಬಳಸಲಾಗುವ ಲಸಿಕೆಗಳಾದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಭಾರತ ಮತ್ತು ಇತರ ದೇಶಗಳಿಂದ ಹಿಂದೆ ಗುರುತಿಸಲಾದ ರೂಪಾಂತರಿ ವೈರಸ್ ಗಳ ವಿರುದ್ಧ ಕೆಲಸ ಮಾಡಿವೆ. ಈ ಹೊಸದಾಗಿ ವರದಿಯಾದ ರೂಪಾಂತರಿ B.1.1.529 ವಿರುದ್ಧವೂ ಈ ಲಸಿಕೆಗಳು ಪರಿಣಾಮಕಾರಿಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT