ದೇಶ

ಮೇಘಾಲಯದ ಆಡಳಿತಾರೂಢ ಪಕ್ಷದ ಕಚೇರಿಯಲ್ಲಿ ಜೀವಂತ ಬಾಂಬ್ ಪತ್ತೆ!

Nagaraja AB

ಶಿಲ್ಲಾಂಗ್: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೋಮವಾರ ಶಿಲ್ಲಾಂಗ್ ಗೆ ಭೇಟಿ ನೀಡಿದ್ದಾಗ ಮೇಘಾಲಯದ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕಚೇರಿಯ ಪ್ರವೇಶದ್ವಾರದಲ್ಲಿ ಜೀವಂತ ಬಾಂಬ್ ಪತ್ತೆಯಾಗಿದ್ದು, ಅದನ್ನು ನಿಷ್ಕ್ರೀಯಗೊಳಿಸಲಾಗಿದೆ.

 2 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು ಮೇಘಾಲಯ ಪೊಲೀಸರು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಹೈನೀವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (ಹೆಚ್ ಎನ್ ಎಲ್ ಸಿ) ಬಾಂಬ್ ಇಟ್ಟಿದ ಹೊಣೆಯನ್ನು ಹೊತ್ತುಕೊಂಡಿದೆ. ಆಗಸ್ಟ್ ನಲ್ಲಿ ಎನ್ ಕೌಂಟರ್ ನಲ್ಲಿ ತಮ್ಮ ನಾಯಕ ಚೆರಿಸ್ಟರ್‌ಫೀಲ್ಡ್ ತಂಗ್‌ಕೀವ್ ಅವರ ಹತ್ಯೆಯ ವಿರುದ್ಧ ಪ್ರತಿಭಟನೆ ಸಂಕೇತವಾಗಿ ಬಾಂಬ್ ಇರಿಸಿದ್ದಾಗಿ ಹೇಳಿದೆ.

ರಸ್ತೆ ಯೋಜನೆಯನ್ನು ಉದ್ಘಾಟಿಸಲು ಮತ್ತು ಈಶಾನ್ಯ ಮಂಡಳಿಯ ಸಮ್ಮೇಳನದಲ್ಲಿ ಭಾಗವಹಿಸಲು ವೆಂಕಯ್ಯ ನಾಯ್ಡು ಶಿಲ್ಲಾಂಗ್‌ ಪ್ರವಾಸದಲ್ಲಿದ್ದರು.

SCROLL FOR NEXT