ದೇಶ

ಲಖೀಂಪುರ್ ಹಿಂಸಾಚಾರ: ಈವರೆಗೂ ಕೇಂದ್ರ ಸಚಿವರ ಪುತ್ರನ ವಿರುದ್ಧ ಕ್ರಮ ಏಕಿಲ್ಲ? ಪ್ರತಿಪಕ್ಷಗಳ ಪ್ರಶ್ನೆ

Nagaraja AB

ಲಖನೌ: ಲಖೀಂಪುರ್ ಖೇರ್ ನಲ್ಲಿ ಹಿಂಸಾಚಾರ ಸಂಭವಿಸಿ 72 ಗಂಟೆ ಕಳೆದರೂ ಈವರೆಗೂ ಯಾವೊಬ್ಬ ವ್ಯಕ್ತಿಯನ್ನು ಬಂಧಿಸಿಲ್ಲ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ  ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಹತ್ಯೆ ಆರೋಪ ಹಾಗೂ ಎಫ್ ಐಆರ್ ನಲ್ಲಿ ಹೆಸರಿದ್ದರೂ ಆತನನ್ನು ಈವರೆಗೂ ಏಕೆ ಬಂಧಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ರೈತರೊಂದಿಗೆ ಮಾತುಕತೆ, ಮೃತದೇಹಗಳ ಮರಣೋತ್ತರ ಪರೀಕ್ಷೆ ನಂತರ ಅವುಗಳ ಅಂತ್ಯಕ್ರಿಯೆಯಲ್ಲಿ  ಪೊಲೀಸರು ಬ್ಯುಸಿಯಾಗಿರುವುದಾಗಿ ಉತ್ತರ ಪ್ರದೇಶದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊದಲಿಗೆ, ರೈತರೊಂದಿಗೆ ಮಾತುಕತೆ ನಡೆಸಿ, ಮೃತದೇಹಗಳ ಪರೀಕ್ಷೆ, ಅಂತ್ಯಕ್ರಿಯೆ ಮಾಡುವುದರಲ್ಲಿ ಪೊಲೀಸರು ಬ್ಯುಸಿಯಾಗಿರುವುದಾಗಿ ಲಖನೌ ವಲಯದ ಎಡಿಜಿ ಎಸ್ ಎನ್ ಸಬಾತ್ ತಿಳಿಸಿದ್ದಾರೆ. 

ಮೃತರ ನಾಲ್ವರ ಪೈಕಿ ಒಬ್ಬ ಗುಂಡೇಟಿನಿಂದ ಸಾವನ್ನಪ್ಪಿರುವುದಾಗಿ ರೈತರು ಆರೋಪಿಸಿದ್ದು,  ದೆಹಲಿಯ ಆಸ್ಪತ್ರೆಯಲ್ಲಿ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ರೈತನ ಮೃತನ ದೇಹದ ಅಂತ್ಯಕ್ರಿಯೆ ಇನ್ನೂ ಆಗಿಲ್ಲ, ಆದರೆ, ಉಳಿದ ಇತರ ಮೂವರ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ. 

ಎಫ್ ಐಆರ್ ನಲ್ಲಿ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನ ವಿರುದ್ಧ ಏಕೆ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಅಶಿಶ್ ಮಿಶ್ರಾ ಏಲ್ಲಿ? ಈವರೆಗೂ ಆತನನ್ನು ಏಕೆ ಬಂದಿಸಿಲ್ಲ, ಹಿಂಸಾಚಾರ ಸಂಭವಿಸಿದ 72 ಗಂಟೆ ಕಳೆದಿದ್ದರೂ ಪ್ರಮುಖ ಆರೋಪಿಯನ್ನು ಬಂಧಿಸದಿರುವುದು ದುರದೃಷ್ಟಕರ ಎಂದು ಹಿರಿಯ ಎಸ್ ಪಿ ಮುಖಂಡರೊಬ್ಬರು ಹೇಳಿದ್ದಾರೆ. 

SCROLL FOR NEXT