ಭಾರತೀಯ ರೈಲ್ವೆ 
ದೇಶ

ಅರ್ಹ ರೈಲ್ವೆ ನೌಕರರಿಗೆ ದಸರಾ ಬಂಪರ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸಂಪುಟ!

ಪತ್ರಾಂಕಿತರಲ್ಲದ (ನಾನ್- ಗೆಜೆಟೆಡ್) ಅರ್ಹ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್  ನೀಡಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ನವದೆಹಲಿ: ಪತ್ರಾಂಕಿತರಲ್ಲದ (ನಾನ್- ಗೆಜೆಟೆಡ್) ಅರ್ಹ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್  ನೀಡಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

2020-21 ನೇ ಆರ್ಥಿಕ ವರ್ಷದ  ಬೋನಸ್ ನ್ನು ಸುಮಾರು 11.56 ಲಕ್ಷ ನಾನ್ - ಗೆಜೆಟೆಡ್ ರೈಲ್ವೆ ನೌಕರರು ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 1.985 ಕೋಟಿ ವೆಚ್ಚ ತಗುಲಲಿದೆ.  ದಸರಾ ಮತ್ತು ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಬೋನಸ್ ಘೋಷಿಸಲಾಗುತ್ತದೆ. 

ಅರ್ಹ ನಾನ್- ಗೆಜೆಟೆಡ್ ರೈಲ್ವೆ ನೌಕರರಿಗೆ ಪಿಎಲ್ ಬಿ ಪಾವತಿಸಲು ಮಾಸಿಕ 7000 ರೂ.ಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ಪಾವತಿಸುವ ಗರಿಷ್ಠ ಮೊತ್ತ 17,951 ರೂಪಾಯಿ. ಸರ್ಕಾರದ ಈ ನಿರ್ಧಾರದಿಂದ ಸುಮಾರು 11.56 ಲಕ್ಷ ನಾನ್ -ಗೆಜೆಟೆಡ್ ರೈಲ್ವೆ ಸಿಬ್ಬಂದಿಗೆ ಪ್ರಯೋಜನ ದೊರೆಯುವ ಸಾಧ್ಯತೆಯಿದೆ. 

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಮಂಡಳಿ ಅಧ್ಯಕ್ಷರಾದ ಸುನೀತ್ ಶರ್ಮಾ, ಪ್ರತಿವರ್ಷದಂತೆ ಈ ವರ್ಷವೂ ದಸರಾಕ್ಕೂ ಮುನ್ನ ಬೋನಸ್ ವಿತರಿಸಲಾಗುವುದು ಎಂದು ತಿಳಿಸಿದರು. 

ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಅನೇಕ ರೈಲ್ವೆ ಉದ್ಯೋಗಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಭಯದ ಹೊರತಾಗಿಯೂ ಈಗಲೂ ಕೆಲಸ  ಮಾಡುತ್ತಿದ್ದಾರೆ. ಅಂತವರನ್ನು ಪ್ರೋತ್ಸಾಹಿಸಲು ಬೋನಸ್ ನೀಡಲಾಗುತ್ತಿದೆ  ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT