ಕ್ಯಾನ್ಸರ್ 
ದೇಶ

ಕೋವಿಡ್ ಲಾಕ್ ಡೌನ್ ವೇಳೆ ಜಾಗತಿಕವಾಗಿ 7 ರೋಗಿಗಳ ಪೈಕಿ ಓರ್ವರಿಗೆ ತಪ್ಪಿದ ಕ್ಯಾನ್ಸರ್ ಶಸ್ತ್ರಚಿಕಿತ್ಸೆ

ಕೋವಿಡ್-19 ಲಾಕ್ ಡೌನ್ ನಲ್ಲಿ ಹಲವಾರು ರೋಗಿಗಳು ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಲಾಕ್ ಡೌನ್ ಇದ್ದ ಪರಿಣಾಮದಿಂದಾಗಿ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಪ್ರತಿ 7 ಮಂದಿಯ ಪೈಕಿ ಓರ್ವ ರೋಗಿಗೆ ತಪ್ಪಿದೆ.

ಲಂಡನ್: ಕೋವಿಡ್-19 ಲಾಕ್ ಡೌನ್ ನಲ್ಲಿ ಹಲವಾರು ರೋಗಿಗಳು ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಲಾಕ್ ಡೌನ್ ಇದ್ದ ಪರಿಣಾಮದಿಂದಾಗಿ ಜೀವ ಉಳಿಸುವ ಶಸ್ತ್ರಚಿಕಿತ್ಸೆ ಪ್ರತಿ 7 ಮಂದಿಯ ಪೈಕಿ ಓರ್ವ ರೋಗಿಗೆ ತಪ್ಪಿದೆ ಎಂದು ಅಧ್ಯಯನ ವರದಿ ತಿಳಿಸಿದೆ. 

ಭಾರತವೂ 65 ದೇಶಗಳಿಂದ ಸಂಗ್ರಹಿಸಲಾಗಿರುವ ಡೇಟಾದ ಮೂಲಕ ಈ ಮಾಹಿತಿ ಬಹಿರಂಗಗೊಂಡಿದೆ. ಲ್ಯಾನ್ಸೆಟ್ ಆನ್ಕಾಲಜಿ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಲಾಕ್ ಡೌನ್ ಯೋಜಿತ, ನಿಗದಿಯಾಗಿದ್ದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ. ಕೋವಿಡ್-19 ಸಂಖ್ಯೆಗಳ ಹೊರತಾಗಿ ಕಡಿಮೆ ಆದಾಯವಿರುವ ದೇಶಗಳ ರೋಗಿಗಳು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಿಕೊಂಡಿದ್ದಾರೆ. 

ಯೂನಿವರ್ಸಿಟಿ ಆಫ್ ಬರ್ಮಿಂಗ್ಹ್ಯಾಮ್ ನೇತೃತ್ವದ ಸಂಶೋಧಕರ ಅಧ್ಯಯನದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು ವಿಳಂಬವಾದ ಪರಿಣಾಮ ಹೆಚ್ಚು ಕ್ಯಾನ್ಸರ್ ನಿಂದ ಉಂಟಾಗುವ ಸಾವಿಗೆ ಕಾರಣವಾಯಿತು ಎಂದು ಹೇಳಿದೆ. 

ಸೂಕ್ತ ಸಮಯದಲ್ಲಿ ಆಪರೇಷನ್ ಮಾಡಿದ್ದರೆ ಸಾವನ್ನು ತಡೆಗಟ್ಟಬಹುದಾಗಿತ್ತು ಎಂದು ಅಧ್ಯಯನ ವರದಿ ಹೇಳಿದೆ. ಅಧ್ಯಯನದಲ್ಲಿ 15 ಬಹು ಸಾಮಾನ್ಯವಾದ ಸಾಲಿಡ್ ಕ್ಯಾನ್ಸರ್ ವಿಧಗಳನ್ನು 61 ದೇಶಗಳ 466 ಆಸ್ಪತ್ರೆಗಳಲ್ಲಿ 20,000 ಮಂದಿ ರೋಗಿಗಳಲ್ಲಿ ವಿಶ್ಲೇಷಿಸಲಾಗಿದೆ. 

ಭಾರತದಲ್ಲಿ 15 ಕ್ಯಾನ್ಸರ್ ಕೇಂದ್ರಗಳಿಂದ 1,566 ರೋಗಿಗಳ ಡೇಟಾವನ್ನು ಸಂಗ್ರಹಿಸಿದೆ. ಲಾಕ್ ಡೌನ್ ಅವಧಿಯಲ್ಲಿ ರದ್ದುಗೊಂಡ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಸಣ್ಣಪ್ರಮಾಣದಲ್ಲಿ ನಿರ್ಬಂಧವಿದ್ದಾಗ ರದ್ದುಗೊಂಡ ಸಂಖ್ಯೆಗಳಿಗೆ ಹೋಲಿಕೆ ಮಾಡಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ 7 ರೋಗಿಗಳ ಪೈಕಿ ಓರ್ವ ರೋಗಿ (ಶೇ.15 ರಷ್ಟು) 5.3 ಮಂದಿಗೆ ರೋಗ ನಿರ್ಣಯ ಸ್ಪಷ್ಟವಾದ ಬಳಿಕವೂ ಕೋವಿಡ್-19 ಕಾರಣದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸಂಶೋಧಕರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT