ದೇಶ

ಲಖೀಂಪುರ್  ಹಿಂಸಾಚಾರ:  ಮೃತ ರೈತರ ಕುಟುಂಬ ಸದಸ್ಯರನ್ನು ಭೇಟಿಯಾದ ರಾಹುಲ್, ಪ್ರಿಯಾಂಕಾ ನೇತೃತ್ವದ ಕಾಂಗ್ರೆಸ್ ನಿಯೋಗ

Nagaraja AB

ಲಖನೌ: ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿನ 8 ಸದಸ್ಯರನ್ನೊಳಗೊಂಡ ಕಾಂಗ್ರೆಸ್ ನಿಯೋಗ ಲಖೀಂಪುರ್ ಖೇರ್ ಹಿಂಸಾಚಾರದಲ್ಲಿ ಮೃತಪಟ್ಟ ರೈತನ ಕುಟುಂಬ ಸದಸ್ಯರನ್ನು ಬುಧವಾರ ಭೇಟಿ ಮಾಡಿ ಸಾಂತ್ವನ ಹೇಳುವುದರೊಂದಿಗೆ ರಾಜಕೀಯ ಇಂಬು ಪಡೆದುಕೊಂಡಿದೆ. 

ಕಾಂಗ್ರೆಸ್ ನಿಯೋಗ ಮತ್ತಿತರ ಪಕ್ಷಗಳು ತಮ್ಮ ಐದು ಸದಸ್ಯರ ತಂಡ  ಲಖೀಂಪುರ್ ಖೇರ್ ಗೆ ಹೋಗಲು ಉತ್ತರ ಪ್ರದೇಶ ಸರ್ಕಾರ ಅವಕಾಶ ನೀಡಿದ ನಂತರ   ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೆವಾಲಾ, ಕೆ. ಸಿ. ವೇಣುಗೋಪಾಲ್, ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಲ್ ಬಘೇಲ್ , ರಾಜಸ್ಥಾನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ, ದೀಪೆಂದರ್ ಹೂಡಾ ಅವರನ್ನೊಳಗೊಂಡ 8 ಸದಸ್ಯರ ತಂಡ ಲಖೀಂಪುರ್ ಗೆ ಭೇಟಿ ನೀಡಿತ್ತು.

ಇದಕ್ಕೂ ಮುನ್ನ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದ ಪಿಎಸಿ ಅತಿಥಿ ಗೃಹದಿಂದ ಬಿಡುಗಡೆ ಮಾಡಲಾಯಿತು. ಭಾನುವಾರ ಸಂಭವಿಸಿದ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತ ಕುಟುಂಬ ಸದಸ್ಯರಿಗೆ 50 ಲಕ್ಷ ರೂ. ಆರ್ಥಿಕ ನೆರವನ್ನು ಛತ್ತೀಸ್ ಗಢ ಹಾಗೂ ಪಂಜಾಬ್ ಮುಖ್ಯಮಂತ್ರಿ ಘೋಷಿಸಿದರು.

SCROLL FOR NEXT