ದೇಶ

ಇಂದಿನಿಂದ ನವರಾತ್ರಿ ಆರಂಭ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ

Manjula VN

ನವದೆಹಲಿ: ನವರಾತ್ರಿ ಸಂಭ್ರಮ ಗುರುವಾರದಿಂದ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. 

ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುವ ನವರಾತ್ರಿ ಇಂದಿನಿಂದ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿಯವರು ಟ್ವೀಟ್ ಮಾಡುವ ಮೂಲಕ ದೇಶದ ಜನತೆಗೆ ಶುಭಾಶಯಗಳನ್ನು ಹೇಳಿದ್ದಾರೆ. 

ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು. "ಎಲ್ಲರಿಗೂ ನವರಾತ್ರಿ ಶುಭಾಶಯಗಳು. ಮುಂಬರುವ ದಿನಗಳು ಜಗತ್ ಜನನಿ ಮಾ ಪೂಜೆಗೆ ನಮ್ಮನ್ನು ಅರ್ಪಿಸಿಕೊಳ್ಳುವ ಬಗ್ಗೆಯಾಗಿದೆ. ನವರಾತ್ರಿ ಪ್ರತಿಯೊಬ್ಬರ ಜೀವನದಲ್ಲಿ ಶಕ್ತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಹೇಳಿದ್ದಾರೆ. 

ಜನತೆಗೆ ಶುಭಾಶಯ ಕೋರಿರುವ ಜೊತೆಗೆ ಫೋಟೋವೊಂದನ್ನೂ ಮೋದಿಯವರು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಮೋದಿಯವರು ದುರ್ಗಾ ಮಾತೆಗೆ ಪೂಜೆ ಮಾಡುತ್ತಿರುವುದು ಕಂಡು ಬಂದಿದೆ. ಇದಷ್ಟೇ ಅಲ್ಲದೆ, ವಿಡಿಯೋವೊಂದನ್ನೂ ಮೋದಿಯವರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಶೈಲಪುತ್ರಿ ದೇವತೆಯ ಸ್ತುತಿ ಇರುವುದು ಕಂಡು ಬಂದಿದೆ. 

ನವರಾತ್ರಿಯ ಮೊದಲ ದಿನ ಇಂದಾಗಿದ್ದು, ಇಂದು ಮಾ ಶೈಲಪುತ್ರಿಯನ್ನು ಆರಾಧಿಸುತ್ತೇವೆ. ಶೈಲಪುತ್ರಿಗೆ ಅರ್ಪಿತವಾದ ಸ್ತುತಿ ಇಲ್ಲಿದೆ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದಾರೆ. 

ನವರಾತ್ರಿ ಉತ್ಸವ 9 ದಿನಗಳ ಕಾಲ ನಡೆಯಲಿದ್ದು, ದುರ್ಗೆಯ 9 ಅವತಾರಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

SCROLL FOR NEXT