ಸಾಂದರ್ಭಿಕ ಚಿತ್ರ 
ದೇಶ

ಭಾರತೀಯ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ನಿಯಮ ಕೈ ಬಿಟ್ಟ ಬ್ರಿಟನ್

ಯುಕೆ ಸರ್ಕಾರ ಗುರುವಾರ ಭಾರತವನ್ನು ತನ್ನ ಲಸಿಕೆ-ಅರ್ಹ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಇದರರ್ಥ ಲಸಿಕೆ ಪಡೆದ ಭಾರತೀಯರು ಅಕ್ಟೋಬರ್ 11 ರಿಂದ ಹೆಚ್ಚಿನ ಸಮಯ ಕ್ವಾರಂಟೈನ್ ಗೆ ಒಳಪಡುವ ಅಗತ್ಯವಿರುವುದಿಲ್ಲ.

ಲಂಡನ್: ಯುಕೆ ಸರ್ಕಾರ ಗುರುವಾರ ಭಾರತವನ್ನು ತನ್ನ ಲಸಿಕೆ-ಅರ್ಹ ರಾಷ್ಟ್ರಗಳ ಪಟ್ಟಿಗೆ ಸೇರಿಸಿದೆ. ಇದರರ್ಥ ಲಸಿಕೆ ಪಡೆದ ಭಾರತೀಯರು ಅಕ್ಟೋಬರ್ 11 ರಿಂದ ಹೆಚ್ಚಿನ ಸಮಯ ಕ್ವಾರಂಟೈನ್ ಗೆ ಒಳಪಡುವ ಅಗತ್ಯವಿರುವುದಿಲ್ಲ.

ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಸುಮಾರು 37 ಹೊಸ ರಾಷ್ಟ್ರಗಳ ಲಸಿಕೆ ಪಡೆದ ಅರ್ಹ ಪ್ರಯಾಣಿಕರನ್ನು ಸಂಪೂರ್ಣ ಲಸಿಕೆ ಪಡೆದು ಹಿಂತಿರುಗಿದ ಯುಕೆ ನಿವಾಸಿಗಳಂತೆ ಪರಿಗಣಿಸಲಾಗುವುದು, ಆದ್ದರಿಂದ ಅವರು ಇಂಗ್ಲೆಂಡ್ ಗೆ ಬರುವ ಮುನ್ನ 10 ದಿನಗಳ ಕಾಲ ಕ್ವಾರೈಂಟೈನ್ ಅಗತ್ಯವಿಲ್ಲ ಎಂದು ಡಿಪಾರ್ಟ್ ಮೆಂಟ್ ಫಾರ್ ಟ್ರಾನ್ಸ್ ಪೋರ್ಟ್ ಹೇಳಿದೆ.

ಅಕ್ಟೋಬರ್ 11 ಗಿಂತ  ಮುಂಚಿತವಾಗಿ ಆಗಮಿಸುವವರು ಇನ್ನೂ ಲಸಿಕೆ ಹಾಕದ ಪ್ರಯಾಣಿಕರಿಗೆ ಇರುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯುಕೆ ಮತ್ತಷ್ಟು ಅಂತಾರಾಷ್ಟ್ರೀಯ ಪ್ರಯಾಣವನ್ನು ಮುಕ್ತಗೊಳಿಸಿದೆ. ಅಕ್ಟೋಬರ್ 11 ರಿಂದ ಭಾರತೀಯ ಲಸಿಕಾ ಪ್ರಮಾಣ ಪತ್ರ ವ್ಯವಸ್ಥೆಯನ್ನು ಪರಿಗಣಿಸಲಾಗುವುದು.  ಸಾರ್ವಜನಿಕ ಆರೋಗ್ಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಮ್ಮ ಸಚಿವಾಲಯಗಳ ನಡುವಿನ ನಿಕಟ ತಾಂತ್ರಿಕ ಸಹಕಾರದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತದ ಬ್ರಿಟಿಷ್ ಹೈ ಕಮಿಷನ್‌ನ ವಕ್ತಾರರು ತಿಳಿಸಿದ್ದಾರೆ.

ಲಸಿಕೆ ಪ್ರಮಾಣೀಕರಣದ ವಿಸ್ತರಣೆಯು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವ ಮೂಲಕ ಸುರಕ್ಷತೆ ಮತ್ತು ಸುಸ್ಥಿರ ರೀತಿಯಲ್ಲಿ ಜನರು ಮತ್ತೊಮ್ಮೆ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವ ಒಂದು ಮುಂದಿನ ಹೆಜ್ಜೆಯಾಗಿದೆ" ಎಂದು ವಕ್ತಾರರು ಹೇಳಿದರು.

ಅಕ್ಟೋಬರ್ 11 ರಿಂದ ಎರಡು ಡೋಸ್ ಕೋವಿಶೀಲ್ಡ್  ಅಥವಾ ಯುಕೆ ಅನುಮೋದಿತ ಲಸಿಕೆ  ಪಡೆದ ಭಾರತೀಯ ಪ್ರಯಾಣಿಕರು ಯುಕೆಗೆ ಬರುವ 14 ದಿನಗಳ ಮೊದಲು ಕ್ವಾರಂಟೈನ್ ಮಾಡದೇ ಪ್ರಯಾಣಿಸಬಹುದು; ಪೂರ್ವ-ನಿರ್ಗಮನ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಅಥವಾ ಅವರ ಆಗಮನದ ನಂತರ 8 ನೇ ದಿನದ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT