ದೇಶ

ಆರೋಗ್ಯ, ಶುದ್ಧ ನೀರು, ಹಸಿರು ಇಂಧನ ಸಹಕಾರ: ಭಾರತ-ಡೆನ್ಮಾರ್ಕ್ ಒಪ್ಪಂದ

Lingaraj Badiger

ನವದೆಹಲಿ: ವಿಶಿಷ್ಟವಾದ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಮ್ಮತಿಸಿರುವ ಭಾರತ ಮತ್ತು ಡೆನ್ಮಾರ್ಕ್ ಶನಿವಾರ ಕೌಶಲ್ಯ ಅಭಿವೃದ್ಧಿ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿಯವರು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸನ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. 

ಫ್ರೆಡೆರಿಕ್‌ಸೆನ್‌ರ ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂತಹ ದ್ವಿಪಕ್ಷೀಯ ಭೇಟಿಗಳನ್ನು ನಿಲ್ಲಿಸಿದ ನಂತರ ಕಳೆದ 20 ತಿಂಗಳಲ್ಲಿ ಭಾರತಕ್ಕೆ ರಾಷ್ಟ್ರದ ಮುಖ್ಯಸ್ಥರು ಅಥವಾ ಸರ್ಕಾರದ ಮೊದಲ ದೇಶ ಭೇಟಿ ಇದಾಗಿದೆ.

ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಿದೆ ಎಂದು ಡೆನ್ಮಾರ್ಕ್ ಪ್ರಧಾನಿ ಹೇಳಿದ್ದು, ಮುಂಬರುವ ದಿನಗಳಲ್ಲಿ ನಡೆಯಲಿರುವ ಭಾರತ-ನಾರ್ಡಿಕ್ ಶೃಂಗಸಭೆಗೆ ನೀಡಿರುವ ಆಹ್ವಾನಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.

ಹಸಿರು ತಂತ್ರಜ್ಞಾನಗಳ ಬಗ್ಗೆ ಗಮನ ಹರಿಸಿದ್ದಕ್ಕಾಗಿ ಮೋದಿಯನ್ನು ಅಭಿನಂದಿಸಿದ ಫ್ರೆಡೆರಿಕ್‌ಸೆನ್‌ ಅವರು, ಪ್ರಧಾನಿ ಮೋದಿ "ಪ್ರಪಂಚದ ಉಳಿದ ಭಾಗಗಳಿಗೆ ಸ್ಫೂರ್ತಿ" ಎಂದು ಬಣ್ಣಿಸಿದ್ದಾರೆ.

ಇನ್ನು ಕೋವಿಡ್ -19 ಸಾಂಕ್ರಾಮಿಕ ರೋಗದ ಹಾವಳಿಯ ಸಂದರ್ಭದಲ್ಲಿ ಭಾರತ ಮತ್ತು ಡೆನ್ಮಾರ್ಕ್ ಪರಸ್ಪರ ಪೂರಕವಾಗಿ ಕೆಲಸ ನಿರ್ವಹಿಸಿವೆ. ಭವಿಷ್ಯದಲ್ಲೂ ನಮ್ಮ ನಡುವಿನ ಪಾಲುದಾರಿಕೆ ಹೆಚ್ಚಲಿದೆ ಎಂಬ ವಿಶ್ವಾಸ ಇರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

SCROLL FOR NEXT