ದೇಶ

ರೈಲು ಪ್ರಯಾಣಿಕರ ಗಮನಕ್ಕೆ: ವಿಪಿಎಸ್ ಬಳಕೆ ಮಾಡಿದಲ್ಲಿ ಇನ್ನು ಮುಂದೆ ಆನ್ ಲೈನ್ ರೈಲು ಟಿಕೆಟ್ ಖರೀದಿ ಅಸಾಧ್ಯ!

Srinivas Rao BV

ನವದೆಹಲಿ: ವರ್ಚ್ಯುಯಲ್ ಪ್ರೈವೆಟ್ ಸರ್ವರ್ (ವಿಪಿಎಸ್) ಬಳಕೆ ಮಾಡಿ ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೆ ಇನ್ನು ಮುಂದಿನ ದಿನಗಳಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸಾಧ್ಯವಾಗುವುದಿಲ್ಲ.

ಆನ್ ಲೈನ್ ಟಿಕೆಟ್ ಗಳನ್ನು ಖರೀದಿಸುವುದಕ್ಕೆ ಅಕ್ರಮವಾಗಿ ಸಾಫ್ಟ್ ವೇರ್ ಬಳಕೆ ಮಾಡಲಾಗುತ್ತಿರುವುದನ್ನು ನಿರಂತರವಾಗಿ ಗಮನಿಸುತ್ತಿದ್ದ ರೈಲ್ವೆ ಸಚಿವಾಲಯ ಟಿಕೆಟ್ ಬುಕ್ ಮಾಡುವವರು ವಿಪಿಎಸ್ ಮೂಲಕ ಐಪಿಯನ್ನು ಗೌಪ್ಯವಾಗಿರಿಸಿ ಟಿಕೆಟ್ ಕಾಯ್ದಿರಿಸುತ್ತಿದ್ದರು. ಈ ಮೂಲಕ ನೈಜ ಲೊಕೇಷನ್ ಗಳ ಪತ್ತೆ ಕಷ್ಟಸಾಧ್ಯವಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ತನ್ನದೇ ಸ್ವಾಮ್ಯದ ಟಿಕೆಟ್ ಕಾಯ್ದಿರಿಸುವ ವೆಬ್ ಸೈಟ್ ಆದ (ಐಆರ್ ಸಿಟಿಸಿ) ಹಾಗೂ ಸೆಂಟರ್ ಫಾರ್ ರೈಲ್ವೆ ಇನ್ಫೋರ್ಮೇಷನ್ ಸಿಸ್ಟಮ್ಸ್ (ಸಿಆರ್ ಐಎಸ್) ಗೆ ವಿಪಿಎಸ್ ಮೂಲಕ ಬರುವ ಟ್ರಾಫಿಕ್ ನ್ನು ಪ್ರಮುಖವಾಗಿ ವೆಬ್ ಸೇವೆಗಳಿಂದ ಬರುವ ಟ್ರಾಫಿಕ್ ನ್ನು ನಿರ್ಬಂಧಿಸಲು ಸೂಚನೆ ನೀಡಿದೆ. ಟೌಟಿಂಗ್ ಚಟುವಟಿಕೆಗಳನ್ನು ತಡೆಯುವುದಕ್ಕಾಗಿ ಮುಂಬೈ ನ್ನು ಡೀಫಾಲ್ಟ್ IP ವಿಳಾಸವನ್ನಾಗಿ ನಿಗದಿಪಡಿಸಲಾಗಿದೆ. 

ನಿಯಮಿತ ಪ್ರಯಾಣಿಕರು/ಏಜೆಂಟ್ ಗಳು ಈ ವಿಪಿಎಸ್ ನ್ನು ಟಿಕೆಟ್ ಕಾಯ್ದಿರಿಸುವುದಕ್ಕೆ ಬಳಕೆ ಮಾಡುವುದಿಲ್ಲ. ಆದ್ದರಿಂದ ವಿಪಿಎಸ್ ನ್ನು ಟೌಟಿಂಗ್ ಚಟುವಟಿಕೆಗಳ ನಿರ್ಬಂಧಿಸುವುದಕ್ಕಾಗಿ ಬಳಕೆ ಮಾಡಬಹುದು ಎಂದು ರೈಲ್ವೆ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. 

SCROLL FOR NEXT