ದೇಶ

ಎಲ್ ಎಸಿಯುದ್ದಕ್ಕೂ ಇರುವ ಉಳಿದ ಪ್ರದೇಶಗಳ ಸಮಸ್ಯೆ ಪರಿಹಾರಕ್ಕೆ ಚೀನಾ ನಕಾರ, 13ನೇ ಸುತ್ತಿನ ಮಾತುಕತೆ ವಿಫಲ

Sumana Upadhyaya

ನವದೆಹಲಿ: ಪೂರ್ವ ಲಡಾಕ್ ನ ವಾಸ್ತವಿಕ ನಿಯಂತ್ರಣ ರೇಖೆಯ (LAC) ಉಳಿದಿರುವ ಘರ್ಷಣಾ ಕೇಂದ್ರಗಳ ಸಮಸ್ಯೆಗಳನ್ನು ಪರಿಹರಿಸಲು ಭಾರತೀಯ ಸೇನೆಯು ನೀಡಿದ ರಚನಾತ್ಮಕ ಸಲಹೆಗಳನ್ನು ಚೀನಾ ಸೇನೆಯು ಒಪ್ಪಿಕೊಂಡಿಲ್ಲ. ಇದರಿಂದಾಗಿ 13 ನೇ ಸುತ್ತಿನ ಮಾತುಕತೆಗಳು ಯಾವುದೇ ಫಲಪ್ರದ ಫಲಿತಾಂಶವನ್ನು ನೀಡದೆ ನಿನ್ನೆ ಮುಕ್ತಾಯವಾಗಿದೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ನಿನ್ನೆ ನಡೆದ 13ನೇ ಸುತ್ತಿನ ಮಾತುಕತೆಯ ವಿವರ ನೀಡಿದ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳು, ಸಭೆಯಲ್ಲಿ, ಭಾರತದ ಕಡೆಯವರು ಉಳಿದ ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಸಲಹೆಗಳನ್ನು ನೀಡಿದರು ಆದರೆ ಚೀನಾದ ಭಾಗವು ಒಪ್ಪಿಕೊಳ್ಳಲಿಲ್ಲ ಮತ್ತು ಯಾವುದೇ ಮುಂದಕ್ಕೆ ಕಾಣುವ ಪ್ರಸ್ತಾಪಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ.

ಎರಡೂ ಕಡೆಯವರು ಮಾತುಕತೆಯನ್ನು ನಿರ್ವಹಿಸಲು ಮತ್ತು ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಸ್ಥಿರತೆಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಚೀನಾದ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಪರಿಗಣಿಸುತ್ತಾರೆ. ಉಳಿದ ಸಮಸ್ಯೆಗಳ ಆರಂಭಿಕ ಪರಿಹಾರಕ್ಕಾಗಿ ಮುಂದೆ ಕೆಲಸ ಮಾಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

ನಿನ್ನೆ 13ನೇ ಸುತ್ತಿನ ಮಾತುಕತೆ ಚೀನಾ ಕಡೆ ಏರ್ಪಟ್ಟಿತ್ತು. ಸಭೆಯಲ್ಲಿ, ಎರಡು ಕಡೆಯವರ ನಡುವಿನ ಚರ್ಚೆಗಳು ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಉಳಿದಿರುವ ಸಮಸ್ಯೆಗಳ ಪರಿಹಾರದ ಮೇಲೆ ಕೇಂದ್ರೀಕರಿಸಿದವು ಎಂದು ಸೇನೆಯು ಹೇಳಿದೆ.

SCROLL FOR NEXT