ದೇಶ

ಶೋಪಿಯಾನ್ ಎನ್ ಕೌಂಟರ್: ಎಲ್ ಇಟಿ ಉಗ್ರ, ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳು ಸೇನಾಪಡೆ ವಶಕ್ಕೆ

Srinivasamurthy VN

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಾರತೀಯ ಸೇನಾ ಪಡೆಗಳ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರೆದಿದ್ದು, ಇಂದು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೋರ್ವನನ್ನು ಸೇನೆ ವಶಕ್ಕೆ ಪಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಫಾಲಿಯನ್ ಮಂಡಲ್ ಪ್ರಾಂತ್ಯದಲ್ಲಿ ಉಗ್ರನನ್ನು ವಶಕ್ಕೆ ಪಡೆಯಲಾಗಿದ್ದು, ಈತನ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ಸೇನೆ ವಶಕ್ಕೆ ಪಡೆದಿದೆ. ಡ್ರೋನ್ ನಿಂದ ಬಂದಿದ್ದ 1 ಎಕೆ47 ಬಂದೂಕು, ನೈಟ್ ವಿಷನ್ ಡಿವೈಸ್, ಮೂರು ಮ್ಯಾಗಜಿನ್ ಬುಲೆಟ್ ಗಳು ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ಸೇನೆ ವಶಕ್ಕೆ ಪಡೆದಿದೆ ಎನ್ನಲಾಗಿದೆ. 

ಡ್ರೋನ್ ನಿಂದ ಬಂದಿದ್ದ ಶಸ್ತ್ರಾಸ್ತ್ರ ಪಡೆಯಲು ಬಂದಿದ್ದ ಲಷ್ಕರ್ ಉಗ್ರ
ಇನ್ನು ಬಂಧಿತ ಉಗ್ರ ಡ್ರೋನ್ ನಿಂದ ಬಂದಿಳಿದಿದ್ದ ಶಸ್ತ್ರಾಸ್ತ್ರಗಳನ್ನು ಪಡೆಯಲು ಫಾಲಿಯನ್ ಮಂಡಲ್ ಪ್ರಾಂತ್ಯಕ್ಕೆ ಆಗಮಿಸಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ. ಈತನ ಶಂಕಾಸ್ಪದ ನಡೆಯನ್ನು ಗಮನಿಸಿದ ಸೇನೆ ಈತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನು ಲಷ್ಕರ್ ಉಗ್ರನೆಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ ಡ್ರೋನ್ ನಿಂದ ಬಂದಿಳಿದಿದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ನಾನು ಬಂದಿದ್ದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. 

ಅಲ್ಲದೆ ಈತ ಹಲವು ಸ್ಥಳೀಯ ಉಗ್ರರೊಂದಿಗೆ ಸಂಪರ್ಕದಲ್ಲಿರುವ ಸೇನಾ ತನಿಖೆಯಿಂದ ತಿಳಿದುಬಂದಿದೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
 

SCROLL FOR NEXT