ಸಂಗ್ರಹ ಚಿತ್ರ 
ದೇಶ

ಆಫ್‌ಲೈನ್‌ನಲ್ಲಿ 10, 12ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆ; ಅ.18ರಂದು ದಿನಾಂಕ ಪ್ರಕಟ: ಸಿಬಿಎಸ್‌ ಸಿ

10 ಮತ್ತು 12ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್‌ನಲ್ಲಿ ಆಫ್‌ಲೈನ್‌ನಲ್ಲಿ ನಡೆಸಲಾಗುವುದು. ದಿನಾಂಕ ಪಟ್ಟಿಯನ್ನು ಅಕ್ಟೋಬರ್ 18ರಂದು ಪ್ರಕಟಿಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ತಿಳಿಸಿದೆ.

ನವದೆಹಲಿ: 10 ಮತ್ತು 12ನೇ ತರಗತಿಯ ಮೊದಲ ಅವಧಿಯ ಬೋರ್ಡ್ ಪರೀಕ್ಷೆಗಳನ್ನು ನವೆಂಬರ್-ಡಿಸೆಂಬರ್‌ನಲ್ಲಿ ಆಫ್‌ಲೈನ್‌ನಲ್ಲಿ ನಡೆಸಲಾಗುವುದು. ದಿನಾಂಕ ಪಟ್ಟಿಯನ್ನು ಅಕ್ಟೋಬರ್ 18ರಂದು ಪ್ರಕಟಿಸಲಾಗುವುದು ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ತಿಳಿಸಿದೆ.

ಪರೀಕ್ಷೆಗಳು ವಸ್ತುನಿಷ್ಠವಾಗಿರುತ್ತವೆ ಮತ್ತು ಪರೀಕ್ಷೆಗಳ ಅವಧಿಯು 90 ನಿಮಿಷಗಳು ಎಂದು ಮಂಡಳಿ ಹೇಳಿದೆ. ಪರೀಕ್ಷೆಗಳು ಚಳಿಗಾಲದ ಋತುವಿನ ದೃಷ್ಟಿಯಿಂದ 10.30ರ ಬದಲು 11.30ರಿಂದ ಆರಂಭವಾಗುತ್ತವೆ. 

ಈ ವರ್ಷ ಕರೋನಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೋರ್ಡ್ ಪರೀಕ್ಷೆಯನ್ನು ಎರಡು ಹಂತಗಳಾಗಿ ವಿಂಗಡಿಸಲು ಮಂಡಳಿ ನಿರ್ಧರಿಸಿದೆ. ಶೇ 50 ಸಿಲಬಸ್ ಪರೀಕ್ಷೆ ನವೆಂಬರ್ 15 ರಿಂದ ಡಿಸೆಂಬರ್ 15 ರ ನಡುವೆ ನಡೆಯಲಿದೆ. ಈ ಪರೀಕ್ಷೆಯು MCQ ಗಳಲ್ಲಿ (ಬಹು ಆಯ್ಕೆ ಪ್ರಶ್ನೆಗಳು) ಇರುತ್ತದೆ ಮತ್ತು ಎಲ್ಲಾ ವಿದ್ಯಾರ್ಥಿಗಳು OMR ಶೀಟ್ ಅನ್ನು ಭರ್ತಿ ಮಾಡಬೇಕು. ಅದೇ ಸಮಯದಲ್ಲಿ, ಎರಡನೇ ಅವಧಿಯ ಪರೀಕ್ಷೆಯು ಮಾರ್ಚ್-ಏಪ್ರಿಲ್ 2022 ರಲ್ಲಿ ನಡೆಯಲಿದೆ. ಸಿಬಿಎಸ್‌ಇ ಹತ್ತನೇ ಮತ್ತು ಹನ್ನೆರಡನೇ ತರಗತಿಯ ಫಲಿತಾಂಶಗಳನ್ನು ಎರಡೂ ಪರೀಕ್ಷೆಯ ಸಂಖ್ಯೆಯನ್ನು ಸೇರಿಸಿ ಘೋಷಿಸಲಾಗುತ್ತದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಣಾಧಿಕಾರಿ ಸಂಯಂ ಭಾರದ್ವಾಜ್ ಹೇಳಿದರು.

ಸಿಬಿಎಸ್‌ಇ 12ನೇ ತರಗತಿಯಲ್ಲಿ 114 ಮತ್ತು 10ನೇ ತರಗತಿಯಲ್ಲಿ 75 ವಿಷಯಗಳನ್ನು ನೀಡುತ್ತಿದೆ. 'ಸಿಬಿಎಸ್‌ಇ ಒಟ್ಟು 189 ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಬೇಕು. ಎಲ್ಲಾ ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಿದರೆ, ಪರೀಕ್ಷೆಗಳ ಸಂಪೂರ್ಣ ಅವಧಿ ಸುಮಾರು 40-45 ದಿನಗಳು. ಆದ್ದರಿಂದ, ವಿದ್ಯಾರ್ಥಿಗಳ ಕಲಿಕೆಯ ನಷ್ಟವನ್ನು ತಪ್ಪಿಸಲು, ಸಿಬಿಎಸ್‌ಇ ನೀಡುವ ವಿಷಯಗಳನ್ನು ಎರಡು ಭಾಗಗಳಾಗಿ ವಿಂಗಡಿಸಲು ನಿರ್ಧರಿಸಿದೆ - ಪ್ರಮುಖ ವಿಷಯಗಳು ಮತ್ತು ಸಣ್ಣ ವಿಷಯಗಳು ಎಂದು ಭಾರದ್ವಾಜ್ ಹೇಳಿದರು.

ಇನ್ನು ಎರಡನೇ ಅವಧಿಯ ಪರೀಕ್ಷೆಯನ್ನು 2022ರ ಮಾರ್ಚ್-ಏಪ್ರಿಲ್ ನಲ್ಲಿ ನಡೆಸಲಾಗುವುದು ಮತ್ತು ಅದು ವಸ್ತುನಿಷ್ಠವಾಗಿರಲಿ ಅಥವಾ ವ್ಯಕ್ತಿನಿಷ್ಠವಾಗಿರಲಿ ಎಂಬುದು ದೇಶದ ಕೋವಿಡ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT