ಆರ್ಯನ್ ಖಾನ್ 
ದೇಶ

ಡ್ರಗ್ಸ್ ಕೇಸ್: ಜೈಲಿನಿಂದ ಶಾರೂಖ್ ಗೆ ವಿಡಿಯೋ ಕಾಲ್; 4,500 ರೂ. ಮನಿ ಅರ್ಡರ್ ಪಡೆದ ಆರ್ಯನ್ ಖಾನ್ 

 ಡ್ರಗ್ಸ್ ​​ ಪ್ರಕರಣದಲ್ಲಿ ಜೈಲಿನಲ್ಲಿರುವ ಆರ್ಯನ್ ಖಾನ್ ತನ್ನ ತಂದೆ ಶಾರೂಖ್ ಖಾನ್ ಮತ್ತು ಗೌರಿಯೊಂದಿಗೆ ಮುಂಬೈನ ಆರ್ಥರ್ ರೋಡ್ ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸಿದ್ದಾನೆ ಎಂದು ಜೈಲು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮುಂಬೈ:  ಡ್ರಗ್ಸ್ ​​ ಪ್ರಕರಣದಲ್ಲಿ ಜೈಲಿನಲ್ಲಿರುವ ಆರ್ಯನ್ ಖಾನ್ ತನ್ನ ತಂದೆ ಶಾರೂಖ್ ಖಾನ್ ಮತ್ತು ಗೌರಿಯೊಂದಿಗೆ ಮುಂಬೈನ ಆರ್ಥರ್ ರೋಡ್ ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸಿದ್ದಾನೆ ಎಂದು ಜೈಲು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಕ್ರೂಸ್ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ 23 ವರ್ಷದ ಆರ್ಯನ್​​ ಖಾನ್​ಗೆ ಕುಟುಂಬವು 4,500 ರೂಪಾಯಿ ಮನಿ ಆರ್ಡರ್​​ ಕಳುಹಿಸಿದೆ. ಜೈಲಿನಲ್ಲಿ ಆರ್ಯನ್​ ತನಗೆ ಇಷ್ಟವಾದ ಆಹಾರ ಹಾಗೂ ಇತರೆ ವಸ್ತು ಖರೀದಿ ಮಾಡಲು ಮನಿ ಆರ್ಡರ್ ಮಾಡಲಾಗಿದೆ. ಅಲ್ಲದೇ ವಾರದಲ್ಲಿ ಎರಡು ಸಲ ವಿಡಿಯೋ ಕಾಲ್​ ಮಾಡಿ ಪೋಷಕರೊಂದಿಗೆ 10 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿದೆ.

ಆರ್ಯನ್ ಖಾನ್​ಗೆ ಅವರ ಕುಟುಂಬದವರು ಅಕ್ಟೋಬರ್ 11 ರಂದು 4,500 ರೂಪಾಯಿಗಳ ಮನಿ ಆರ್ಡರ್​ನನ್ನು ಕಳುಹಿಸಿದ್ದಾರೆ. ಇದನ್ನು ಜೈಲು ಕ್ಯಾಂಟೀನ್‌ನಲ್ಲಿ ಅವರು ಬಳಸಹುದಾಗಿದೆ. ನಿಯಮಗಳ ಪ್ರಕಾರ ಜೈಲಿನೊಳಗೆ ಕೈದಿಗಳು ತಮ್ಮ ವೆಚ್ಚಕ್ಕಾಗಿ ಗರಿಷ್ಠ 4500 ರೂಪಾಯಿಗಳ ಮನಿ ಆರ್ಡರ್ ಪಡೆಯಬಹುದು ಎಂದು ಜೈಲ್ ಸೂಪರಿಂಟೆಂಡೆಂಟ್ ನಿತಿನ್ ವೇಚಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅವಿಶ್ವಾಸ ನಿರ್ಣಯ ಚರ್ಚೆಯಾಗೋವರೆಗೂ ನಾನು ಸದನವನ್ನು ಪ್ರವೇಶಿಸಲ್ಲ, ಸ್ಪೀಕರ್ ಸ್ಥಾನದಲ್ಲಿ ಕೂರಲ್ಲ: ಓಂ ಬಿರ್ಲಾ ಪ್ರತಿಜ್ಞೆ

ನನ್ನ ಆತ್ಮಚರಿತ್ರೆ ಇನ್ನೂ ಪ್ರಕಟವಾಗಿಲ್ಲ: ಪ್ರಕಾಶಕರ ಬೆಂಬಲಕ್ಕೆ ನಿಂತ ಮಾಜಿ ಸೇನಾ ಮುಖ್ಯಸ್ಥ ನರವಾಣೆ

ಮದುವೆ, ಬ್ಲಾಕ್ ಮೇಲ್: ತಾಯಿ-ದೊಡ್ಡಮ್ಮ ಬೆ*ಲೆ ಫೋಟೋ ಕೇಸ್ ಗೆ ಟ್ವಿಸ್ಟ್

ಹಿರಿಯ ಪತ್ರಕರ್ತ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪಿ. ರಾಮಯ್ಯ ಇನ್ನಿಲ್ಲ

ಟಿ20 ವಿಶ್ವಕಪ್ 2026: ತಾರಿಖ್ ಭರ್ಜರಿ ಬೌಲಿಂಗ್, USA ವಿರುದ್ಧ ಪಾಕಿಸ್ತಾನಕ್ಕೆ 32 ರನ್ ಜಯ

SCROLL FOR NEXT