ಪ್ರಧಾನಿ ಮೋದಿ 
ದೇಶ

ವಿಜಯದಶಮಿಯಂದೇ ದೇಶಕ್ಕೆ 7 ಹೊಸ ರಕ್ಷಣಾ ಕಂಪನಿಗಳನ್ನು ಅರ್ಪಿಸಿದ ಪ್ರಧಾನಿ ಮೋದಿ

ವಿಜಯದಶಮಿ ಹಬ್ಬದ ಅಂಗವಾಗಿ ಪ್ರಧಾನಿ ಮೋದಿ ಅವರು ಇಂದು 7 ನೂತನ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. 

ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ಪ್ರಧಾನಿ ಮೋದಿ ಅವರು ಇಂದು 7 ನೂತನ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಅರ್ಪಣೆ ಮಾಡಿದ್ದಾರೆ. 

ಹೌದು.. ಈ ಹಿಂದೆ ದೇಶದ ರಕ್ಷಣಾ ಕ್ಷೇತ್ರ ಬಿಳಿಯಾನೆಯಂತಾಗಿದ್ದು ಬರೋಬ್ಬರಿ 300 ವರ್ಷಗಳ ಅರ್ಡಿನವ್ ಫ್ಯಾಕ್ಟರಿ ಬೋರ್ಡ್ ಅನ್ನು ಕೇಂದ್ರ ಸರ್ಕಾರ ಕಳೆದ ತಿಂಗಳು ತಾನೆ ಬರ್ಖಾಸ್ತು ಮಾಡಿತ್ತು. ಬಳಿಕ ಆಧುನಿಕ ಸಮಯದ ಚಾಲೆಂಜ್‌ಗಳಿಗೆ ಅನುಗುಣವಾಗುವಂತಹ ಮತ್ತು ಟೈಂಪೌಂಡ್ ಆಗಿ ಕಾರ್ಯ ನಿರ್ವಹಿಸುವಂಥ 7 ಕಂಪನಿಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. 

ಅದರಂತೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಹೊಸ 7 ರಕ್ಷಣಾ ಸಂಸ್ಥೆಗಳನ್ನ ದೇಶಕ್ಕೆ ಅರ್ಪಿಸಿದ್ದಾರೆ.

ಹೊಸ 7 ಕಂಪನಿಗಳು
ಮುನಿಷನ್ ಇಂಡಿಯಾ ಲಿಮಿಟೆಡ್, ಅರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ ವೆಪನ್ಸ್ ಅಂಡ್ ಇಷ್ಮೆಂಟ್ ಇಂಡಿಯಾ ಲಿಮಿಟೆಡ್, ಗ್ರೂಪ್ ಕಂಫರ್ಟ್‌ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಫೈಲ್ ಲಿಮಿಟೆಡ್, ಗೈಡರ್‌ ಇಂಡಿಯಾ ಲಿಮಿಟೆಡ್ ಎಂಬ 7 ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ವಿಜಯದಶಮಿಯ ಅಂಗವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, 'ಸಂಶೋಧನೆ ಮತ್ತು ನಾವಿನ್ಯತೆಗೆ ಹೊಸ 7ಕಂಪನಿಗಳು ಆದ್ಯತೆ ಮೇರೆಗೆ ಒತ್ತು ನೀಡಬೇಕು. ಆ ಮೂಲಕ ಭವಿಷ್ಯದ ತಂತ್ರಜ್ಞಾನದಲ್ಲಿ ಮುನ್ನಡೆಯನ್ನು ಸಾಧಿಸಬೇಕು. ಈ ಕಂಪನಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವಂತೆ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

'ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ತರಲಾಯಿತು.  ಇದು ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ ಮತ್ತು ವಿಶ್ವಾಸವನ್ನು ಹೊಂದಿದೆ. ಭಾರತವನ್ನು ರಕ್ಷಣಾ ಸಾಧನಗಳ ಪ್ರಮುಖ ಉತ್ಪಾದಕನಾಗಿ ಅಭಿವೃದ್ಧಿಪಡಿಸಲು ನಿಶ್ಚಲವಾದ ನೀತಿಗಳ ಬದಲಿಗೆ ಏಕ-ವಿಂಡೋ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ವಾವಲಂಬಿ ಭಾರತ ಅಭಿಯಾನದ ಅಡಿಯಲ್ಲಿ, ಭಾರತವನ್ನು ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನಾಗಿ ಮಾಡುವುದು ಮತ್ತು ಭಾರತದ ಆಧುನಿಕ ಮಿಲಿಟರಿ ಉದ್ಯಮವನ್ನು ಅಭಿವೃದ್ಧಿಪಡಿಸುವುದು ದೇಶದ ಗುರಿಯಾಗಿದೆ ಎಂದು ಮೋದಿ ಹೇಳಿದರು.

ಅಂತೆಯೇ, 'ಕಳೆದ ಏಳು ವರ್ಷಗಳಲ್ಲಿ, 'ಮೇಕ್ ಇನ್ ಇಂಡಿಯಾ' ಮಂತ್ರದೊಂದಿಗೆ ಈ ಸಂಕಲ್ಪವನ್ನು ಮುಂದುವರಿಸಲು ದೇಶವು ಕೆಲಸ ಮಾಡಿದೆ. ಭಾರತವು ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಇಂದು, ದೇಶದ ರಕ್ಷಣಾ ವಲಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ, ವಿಶ್ವಾಸ ಮತ್ತು ತಂತ್ರಜ್ಞಾನ ಚಾಲಿತ ವಿಧಾನವಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ನಮ್ಮ ರಕ್ಷಣಾ ವಲಯದಲ್ಲಿ ಹಲವು ಪ್ರಮುಖ ಸುಧಾರಣೆಗಳು ನಡೆಯುತ್ತಿವೆ. ನಿಶ್ಚಲವಾದ ನೀತಿಗಳ ಬದಲು ಏಕ-ವಿಂಡೋ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಮೋದಿ ಹೇಳಿದರು.

ಸ್ವಾತಂತ್ರ್ಯದ ನಂತರ, ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಮೇಲ್ದರ್ಜೆಗೇರಿಸುವ, ಹೊಸ-ಯುಗದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿತ್ತು, ಆದರೆ ಅದರ ಬಗ್ಗೆ ಹೆಚ್ಚು ಗಮನಹರಿಸಲಾಗಲಿಲ್ಲ.  ನಮ್ಮ ಸ್ವಾವಲಂಬನೆ ಮತ್ತು ರಕ್ಷಣಾ ಸಿದ್ಧತೆಯನ್ನು ಸುಧಾರಿಸುವ ಕ್ರಮವಾಗಿ 41 ಆರ್ಡಿನೆನ್ಸ್ ಕಾರ್ಖಾನೆಗಳನ್ನು ಏಳು ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಲಾಗುತ್ತಿದೆ. ಹೊಸ ಭವಿಷ್ಯವನ್ನು ನಿರ್ಮಿಸಲು ಭಾರತವು ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಉದ್ಯಮ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT