ಭದ್ರತಾ ಪಡೆಗಳ ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಬಳಿಕ ಒಂಬತ್ತು ಎನ್ ಕೌಂಟರ್ ಗಳಲ್ಲಿ 13 ಉಗ್ರರ ಹತ್ಯೆ- ಐಜಿಪಿ ವಿಜಯ್ ಕುಮಾರ್

ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ  ನಾಗರಿಕರ ಹತ್ಯೆ ಬಳಿಕ  ಉಗ್ರರು ಹಾಗೂ ಭದ್ರತಾ ಪಡೆ ನಡೆದ ಒಂಬತ್ತು ಎನ್ ಕೌಂಟರ್ ಗಳಲ್ಲಿ 13 ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಶನಿವಾರ ತಿಳಿಸಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ  ನಾಗರಿಕರ ಹತ್ಯೆ ಬಳಿಕ  ಉಗ್ರರು ಹಾಗೂ ಭದ್ರತಾ ಪಡೆ ನಡೆದ ಒಂಬತ್ತು ಎನ್ ಕೌಂಟರ್ ಗಳಲ್ಲಿ 13 ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಶನಿವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ ಶ್ರೀ ನಗರದಲ್ಲಿ 5 ಉಗ್ರರ ಪೈಕಿ ಮೂವರನ್ನು ಹತ್ಯೆ ಮಾಡಲಾಗಿದೆ. ನಾಗರಿಕರ ಹತ್ಯೆ ಬಳಿಕ ಒಂಬತ್ತು ಎನ್ ಕೌಂಟರ್ ಗಳಲ್ಲಿ 13 ಉಗ್ರರನ್ನು ಕೊಲ್ಲಲಾಗಿದೆ ಎಂದು ತಿಳಿಸಿದರು.

ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ನಾಗರಿಕರ ಹತ್ಯೆ ಬಳಿಕ ಭದ್ರತಾ ಪಡೆಗಳಿಂದ ನಡೆದ ಎಂಟು ಎನ್ ಕೌಂಟರ್ ಗಳಲ್ಲಿ ಒಟ್ಟು 11 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ವಿಜಯ್ ಕುಮಾರ್ ಶುಕ್ರವಾರ ತಿಳಿಸಿದ್ದರು.  ಕಣಿವೆ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಅನೇಕ ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?

BJP ತೊರೆಯಲು ಕಾರಣ ಬಹಿರಂಗಪಡಿಸಿದ Annamalai; ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದೇನೆಂದರೆ

SIR ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು: ಸಿಎಂ ಶಿವಕುಮಾರ್ ಗೆ ಪ್ರಕಾಶ್ ರಾಜ್ ಮನವಿ