ದೇಶ

ಸಿಡಬ್ಲ್ಯೂಸಿ ಎಂದರೆ 'ಪರಿವಾರ ಬಚಾವೋ ಕಾರ್ಯ ಸಮಿತಿ': ಬಿಜೆಪಿ ಲೇವಡಿ

Lingaraj Badiger

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು "ಪರಿವಾರ ಬಚಾವೋ ಕಾರ್ಯಕಾರಿ ಸಮಿತಿ" ಎಂದು ಬಿಜೆಪಿ ಲೇವಡಿ ಮಾಡಿದ್ದು, ಶನಿವಾರ ನಡೆದ ಸಿಡಬ್ಲ್ಯೂಸಿ ಸಭೆ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಅದರ ನಾಯಕತ್ವದ ವೈಫಲ್ಯಗಳಿಗೆ ಯಾವುದೇ ಉತ್ತರ ನೀಡಲಿಲ್ಲ ಮತ್ತು ಬದಲಿಗೆ ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿದೆ.

ಸಿಂಘು ಗಡಿಯಲ್ಲಿ ನಡೆದ ದಲಿತ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿದಂತೆ ಸಿಡಬ್ಲ್ಯೂಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಟೀಕಿಸಿದ್ದಾರೆ.

ಸಿಂಘು ಗಡಿ ರೈತರ ಪ್ರತಿಭಟನೆಯ ಸ್ಥಳಗಳಲ್ಲಿ ಒಂದಾಗಿದೆ ಮತ್ತು ವಿರೋಧ ಪಕ್ಷವು ಹತ್ಯೆಯ ಹಿಂದೆ "ತಾಲಿಬಾನಿ ಮನೋಭಾವ" ನಿಂತಿದೆಯೇ ಎಂದು ಭಾಟಿಯಾ ಪ್ರಶ್ನಿಸಿದರು.

ರೈತರನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. "ಸಣ್ಣ ಮತ್ತು ಅಗ್ಗದ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ, ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್, ಈ ಪ್ರಮುಖ ವಿಚಾರದಲ್ಲಿ ಮೌನವಾಗಿದೆ ಎಂದರು.

"ಇದು ಕಾಂಗ್ರೆಸ್ ವರ್ಕಿಂಗ್ ಕಮಿಟಿ ಅಲ್ಲ ಪರಿವಾರ ಬಚಾವೋ ವರ್ಕಿಂಗ್ ಕಮಿಟಿ ಎಂದರೆ ತಪ್ಪಾಗದು" ಎಂದ ಭಾಟಿಯಾ, ಸೋನಿಯಾ ಗಾಂಧಿಯವರ ಆರಂಭಿಕ ಮಾತುಗಳು ಪಕ್ಷ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಪರಿಹಾರ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

SCROLL FOR NEXT