ಆಲಪ್ಪುಳ ದಂಪತಿ 
ದೇಶ

ಕೇರಳ: ಪ್ರವಾಹದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ; ಕಲ್ಯಾಣ ಮಂಟಪ ತಲುಪಿದ್ದೇ ರೋಚಕ!

ಕೇರಳದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಪ್ರವಾಹ ಪರಿಸ್ಥಿತಿ ಕೂಡ ಇದ್ದು, ಇದರ ನಡುವೆ ಜೋಡಿಯೊಂದು ಮದುವೆ ಮುಂದೂಡದೆ ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಲಪ್ಪುಳ: ಕೇರಳದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಪ್ರವಾಹ ಪರಿಸ್ಥಿತಿ ಕೂಡ ಇದ್ದು, ಇದರ ನಡುವೆ ಜೋಡಿಯೊಂದು ಮದುವೆ ಮುಂದೂಡದೆ ವಿಭಿನ್ನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಲವಾಡಿಯ ದೇವಸ್ಥಾನಕ್ಕೆ ಹೊಂದಿಕೊಂಡ ಕಲ್ಯಾಣಮಂಟಪದಲ್ಲಿ ಆಕಾಶ್​​ ಮತ್ತು ಐಶ್ವರ್ಯ ಮದುವೆಯಾಗಲು ನಿರ್ಧರಿಸಿದ್ದರು. ಆದ್ರೆ ಮಳೆಯಿಂದಾಗಿ ಕಲ್ಯಾಣಮಂಟಪ ಜಲಾವೃತವಾಗಿತ್ತು. ಹೀಗಾಗಿ ಅವರ ಪೋಷಕರು ವಧು-ವರನನ್ನು ಮದುವೆ ಮಂಟಪಕ್ಕೆ ಪ್ರವಾಹದ ನೀರಿನಲ್ಲಿ ದೊಡ್ಡದಾದ ಅಡುಗೆ ಪಾತ್ರೆಯಲ್ಲಿ ಕೂರಿಸಿ ಕರೆತಂದಿದ್ದಾರೆ. 

ದೊಡ್ಡ ಪಾತ್ರೆಯ ಮೂಲಕ ಕಲ್ಯಾಣ ಮಂಟಪಕ್ಕೆ ಬಂದ ಈ ಜೋಡಿ ಇಂದು ಕೆಲವೇ ಬಂಧು-ಮಿತ್ರರ ಸಮ್ಮುಖದಲ್ಲಿ ಮದುವೆಯಾಗಿದೆ. ಆಲಪ್ಪುಳ ಜಿಲ್ಲೆಯ ನಿವಾಸಿಗಳಾದ ಆಕಾಶ್ ಮತ್ತು ಐಶ್ವರ್ಯ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.ಈ ಇಬ್ಬರು ಚೆಂಗನೂರುವಿನಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಬಾಲಿವುಡ್ ನಟ ನಾನಾ ಪಾಟೇಕರ್ ನಿಧನಕ್ಕೆ ಬಿಗ್ ಟ್ವಿಸ್ಟ್: ಅಸಹಜ ಸಾವು ಕೇಸ್ ದಾಖಲಿಸಿದ ಗೋವಾ ಪೊಲೀಸರು!

ರೈಲಿನಲ್ಲಿ 'ನನ್ನ ಸುತ್ತಲೂ ಬರೀ ಪುರುಷರೇ ಇದ್ದಾರೆ': ಆಂಧ್ರದಲ್ಲಿ ಶವವಾಗಿ ಪತ್ತೆಯಾದ ಡ್ಯಾನ್ಸರ್‌ ಕೊನೆಯ ಸಂದೇಶ!

ಬೇಕಾದರೆ ನನ್ನ ವಿರುದ್ಧವೂ ಫಾರ್ಮ್‌ - 7 ಸಲ್ಲಿಸಿ: ಕಾಂಗ್ರೆಸ್'ಗೆ BJP ಸಂಸದ ಯದುವೀರ್ ಒಡೆಯರ್ ಸವಾಲು

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು