ದೇಶ

ಸಿಬಿಎಸ್​​ಇ 10-12ನೇ ತರಗತಿ ಪ್ರಥಮಾವಧಿ ಬೋರ್ಡ್ ಪರೀಕ್ಷಾ ದಿನಾಂಕ ಪ್ರಕಟ

Lingaraj Badiger

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಸೋಮವಾರ 2021-22ನೇ ಸಾಲಿನ 10 ಮತ್ತು 12ನೇ ತರಗತಿಯ ಪ್ರಥಮಾವಧಿ ಬೋರ್ಡ್ ಪರೀಕ್ಷಾ ದಿನಾಂಕವನ್ನು ಬಿಡುಗಡೆ ಮಾಡಿದೆ.

ನವೆಂಬರ್ ಮತ್ತು​ ಡಿಸೆಂಬರ್​ ತಿಂಗಳಲ್ಲಿ ಅಫ್​​ಲೈನ್​​​​​ನಲ್ಲಿ ಪರೀಕ್ಷೆ ನಡೆಯಲಿದೆ. 10ನೇ ತರಗತಿ ವಿದ್ಯಾರ್ಥಿಳಿಗೆ ನವೆಂಬರ್​ 30ರಿಂದ ಪರೀಕ್ಷೆ ಪ್ರಾರಂಭವಾಗಿ ಡಿಸೆಂಬರ್​ 11ಕ್ಕೆ ಮುಕ್ತಾಯಗೊಳ್ಳಲಿದೆ. 

ಇನ್ನೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್​​​​ 1ರಿಂದ ಪರೀಕ್ಷೆ ಪ್ರಾರಂಭವಾಗಿ ಡಿಸೆಂಬರ್​​ 22ಕ್ಕೆ ಮುಗಿಯಲಿದೆ.

ಪರೀಕ್ಷೆ ಮುಗಿದ ನಂತರ ಅಂಕಪಟ್ಟಿಯ ರೂಪದಲ್ಲಿ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಮೊದಲ ಮತ್ತು ಎರಡನೇ ಅವಧಿಯ ಪರೀಕ್ಷೆಗಳ ನಂತರ ಅಂತಿಮ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಪ್ರಮುಖ ವಿಷಯಗಳಿಗೆ ಪರೀಕ್ಷಾ ದಿನಾಂಕವನ್ನು ಘೋಷಿಸಲಾಗಿದೆ. ಸಣ್ಣ ವಿಷಯಗಳ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂದು ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಅವರು ತಿಳಿಸಿದ್ದಾರೆ.

ಪರೀಕ್ಷೆಗಳು ವಸ್ತುನಿಷ್ಠವಾಗಿರುತ್ತವೆ ಮತ್ತು ಪರೀಕ್ಷೆಗಳ ಅವಧಿಯು 90 ನಿಮಿಷಗಳು ಎಂದು ಮಂಡಳಿ ಹೇಳಿದೆ.

ಪರೀಕ್ಷೆಗಳು ಚಳಿಗಾಲದಲ್ಲಿ ನಡೆಯುತ್ತಿರುವುದರಿಂದ ಬೆಳಗ್ಗೆ 10.30 ರ ಬದಲು 11.30 ರಿಂದ ಆರಂಭವಾಗುತ್ತವೆ.

SCROLL FOR NEXT