ದೇಶ

ತಮಿಳುನಾಡು: ಸಾರ್ವಜನಿಕ ವಲಯ ಉದ್ದಿಮೆಗಳ ನೌಕರರಿಗೆ 216.38 ಕೋಟಿ ರೂ. ಬೋನಸ್ ಪ್ರಕಟಿಸಿದ ಸಿಎಂ ಸ್ಟಾಲಿನ್ 

Nagaraja AB

ಚೆನ್ನೈ: 2020-21 ನೇ ಸಾಲಿಗಾಗಿ ಸಾರ್ವಜನಿಕ ವಲಯ ಉದ್ದಿಮೆಗಳ  2, 87,250 ನೌಕರರಿಗೆ 216.38 ಕೋಟಿ ರೂ. ಬೋನಸ್ ಮತ್ತು ಶೇಕಡಾ 1.67 ರಷ್ಟು ಕೃಪಾಧನ (ಎಕ್ಸ್ -ಗ್ರೇಷಿಯಾ)ವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ ಪ್ರಕಟಿಸಿದ್ದಾರೆ.

ಲಾಭ ಹಾಗೂ ನಷ್ಟದಲ್ಲಿರುವ ಸಾರ್ವಜನಿಕ ವಲಯ ಉದ್ದಿಮೆಗಳ ಸಿ ಮತ್ತು ಡಿ ದರ್ಜೆಯ ನೌಕರರು ಶೇ. 10 ರಷ್ಟು ಬೋನಸ್ ಪಡೆಯಲಿದ್ದಾರೆ. ಖಾಯಂ ನೌಕರರು 8, 400 ರೂ. ಪಡೆಯಲಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಬೋನಸ್ ಪಾವತಿ ಕಾಯ್ದೆ 2015ರ ತಿದ್ದುಪಡಿ ಪ್ರಕಾರ, ಅರ್ಹ ಸಿ ಮತ್ತು ಡಿ ದರ್ಜೆಯ ನೌಕರರ ಅರ್ಹತೆಯ ಮಿತಿಯನ್ನು ರೂ. 21 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬೋನಸ್ ನಿರ್ಧರಿಸಲು ತಿಂಗಳ ಸಂಬಳದ ಮಿತಿಯನ್ನು ಏಳು ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ. 

ಕೋವಿಡ್-19 ಮೊದಲ ಹಾಗೂ ಎರಡನೇ ಅಲೆಯಿಂದಾಗಿ ತಮಿಳುನಾಡು ರಾಜ್ಯ ಸಾರಿಗೆ ನಿಗಮ ಸೇರಿದಂತೆ ಹಲವು ನಿಗಮಗಳ ತೀವ್ರ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದರೂ, ನೌಕರರ ಕುಟುಂಬಗಳ ಕಲ್ಯಾಣವನ್ನು ಪರಿಗಣಿಸಿ, ಪೂರ್ಣ ಮೊತ್ತದ ಸಂಬಳವನ್ನು ಪಾವತಿಸಲಾಗುತ್ತಿದೆ. ಈ ವರ್ಷ ದೀಪಾವಳಿಯನ್ನು ಆಚರಿಸಲು ಸಾರ್ವಜನಿಕ ವಲಯ ಉದ್ದಿಮೆಗಳ ನೌಕರರಿಗೆ ಬೋನಸ್ ಜೊತೆಗೆ ಎಕ್ಸ್ ಗ್ರೇಷಿಯಾ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

SCROLL FOR NEXT