ಮನ್ ಕಿ ಬಾತ್ ನಲ್ಲಿ ಮಾತನಾಡಿದ ಪಿಎಂ ಮೋದಿ 
ದೇಶ

ಡ್ರೋನ್ ಗಳ ಸಹಾಯದಿಂದ ಗ್ರಾಮೀಣ ಪ್ರದೇಶಗಳ ಭೂ ದಾಖಲೆಗಳ ಡಿಜಿಟಲೀಕರಣ: ಪ್ರಧಾನಿ ಮೋದಿ 

ಹೊಸ ಡ್ರೋನ್ ನೀತಿ ದೇಶದಲ್ಲಿ ಉತ್ತಮ ಫಲಿತಾಂಶ ನೀಡುತ್ತಿದ್ದು, ಡ್ರೋನ್ ಮೂಲಕ ಗ್ರಾಮಾಂತರ ಪ್ರದೇಶಗಳ ಭೂಮಿ ದಾಖಲೆಗಳ ಡಿಜಿಟಲೀಕರಣ ಮಾಡುವಲ್ಲಿ ತಯಾರಾಗುತ್ತಿದ್ದು ಜಗತ್ತಿನಲ್ಲಿಯೇ ಮೊದಲ ದೇಶ ಭಾರತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ಹೊಸ ಡ್ರೋನ್ ನೀತಿ ದೇಶದಲ್ಲಿ ಉತ್ತಮ ಫಲಿತಾಂಶ ನೀಡುತ್ತಿದ್ದು, ಡ್ರೋನ್ ಮೂಲಕ ಗ್ರಾಮಾಂತರ ಪ್ರದೇಶಗಳ ಭೂಮಿ ದಾಖಲೆಗಳ ಡಿಜಿಟಲೀಕರಣ ಮಾಡುವಲ್ಲಿ ತಯಾರಾಗುತ್ತಿದ್ದು ಜಗತ್ತಿನಲ್ಲಿಯೇ ಮೊದಲ ದೇಶ ಭಾರತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಡ್ರೋನ್ ಗಳ ಬಳಕೆ ಬಗ್ಗೆ ಜನರ ಭಾವನೆಗಳನ್ನು ಹಿಡಿಯುವುದು ಮುಖ್ಯವಾಗುತ್ತದೆ. ಇಂದಿನ ಯುವಜನತೆ ಮತ್ತು ವಿಶ್ವದ ಸ್ಟಾರ್ಟ್ -ಅಪ್ಸ್ ಗಳು ಈ ವಿಷಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. ಡ್ರೋನ್ ವಲಯಗಳು ಹಲವು ನಿರ್ಬಂಧಗಳು ಮತ್ತು ನಿಯಮಗಳನ್ನು ಒಳಗೊಂಡಿದ್ದವು. ಅದು ಇತ್ತೀಚೆಗೆ ಬದಲಾಗಿದೆ. ಹೊಸ ಡ್ರೋನ್ ನೀತಿ ಉತ್ತಮ ಫಲಿತಾಂಶ ನೀಡುತ್ತಿದೆ ಎಂದರು.

ಈ ವರ್ಷದ ಕಳೆದ ಆಗಸ್ಟ್ 25ರಂದು ದೇಶದಲ್ಲಿ ಹೊಸ ಡ್ರೋನ್ ನೀತಿ ತರಲಾಯಿತು. ಇಂದಿನ ಮತ್ತು ಭವಿಷ್ಯದ ಸಾಧ್ಯತೆಗಳಿಗೆ ಅನುಗುಣವಾಗಿ ಈ ನೀತಿಯನ್ನು ರೂಪಿಸಲಾಗಿದೆ ಎಂದರು. ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಡ್ರೋನ್ ಗಳು ಪ್ರಮುಖ ಪಾತ್ರ ವಹಿಸಿವೆ. ಮಣಿಪುರದಲ್ಲಿ ದ್ವೀಪಕ್ಕೆ ಡ್ರೋನ್ ಮೂಲಕ ವಿತರಣೆ ಮಾಡಲಾಗಿದೆ. ತೆಲಂಗಾಣದಲ್ಲಿ ಡ್ರೋನ್ ಮೂಲಕ ಲಸಿಕೆ ನೀಡುವ ಪ್ರಯೋಗ ಮಾಡಲಾಗಿದೆ. ಗುಜರಾತ್ ನ ಭಾವನಗರದಲ್ಲಿ ನ್ಯಾನೋ-ಯೂರಿಯಾ ವನ್ನು ಡ್ರೋನ್ ಮೂಲಕ ಸಿಂಪಡಿಸಲಾಗಿದೆ ಎಂದರು ಪ್ರಧಾನ ಮಂತ್ರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT