ದೇಶ

ಪಶ್ಚಿಮ ಬಂಗಾಳದಲ್ಲಿ ನ.15 ರಿಂದ ಶಾಲಾ-ಕಾಲೇಜುಗಳು ಪುನರಾರಂಭ

Lingaraj Badiger

ಕೊಲ್ಕತ್ತಾ: ರಾಜ್ಯದಲ್ಲಿ ನವೆಂಬರ್​​ 15ರಿಂದ ಶಾಲಾ -ಕಾಲೇಜುಗಳನ್ನು ಪುನರಾರಂಭಿಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಹೇಳಿದ್ದಾರೆ.

ಹಬ್ಬದ ಸೀಸನ್ ಮುಗಿದ ನಂತರ ರಾಜ್ಯದಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಈ ಮೊದಲೇ ಪಶ್ಚಿಮ ಬಂಗಾಳ ಸರ್ಕಾರವು ಸುಳಿವು ನೀಡಿತ್ತು.

ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಮಾರ್ಚ್ 2020ರಲ್ಲಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದಾಗಿನಿಂದ ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳು  ಮುಚ್ಚಲ್ಪಟ್ಟಿದ್ದವು.

ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಮುಂದಿನ ತಿಂಗಳಿನಿಂದ ಪುನರಾರಂಭಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.  

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್ಇ) ಮತ್ತು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್ ಸಿಇ) ನವೆಂಬರ್ ನಲ್ಲಿ ಆಫ್ ಲೈನ್ ಸೆಮಿಸ್ಟರ್ ಬೋರ್ಡ್ ಪರೀಕ್ಷೆಗಳಿಗೆ ದಿನಾಂಕಗಳನ್ನು ಪ್ರಕಟಿಸುವ ಮುನ್ನ ಈ ಪ್ರಕಟಣೆ ಬಂದಿದೆ.

SCROLL FOR NEXT