ದೇಶ

ನಾಳೆ ಅಮರಿಂದರ್‌ ಸಿಂಗ್‌ ರಿಂದ ಹೊಸ ಪಕ್ಷ ಘೋಷಣೆ ಸಾಧ್ಯತೆ

Lingaraj Badiger

ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬುಧವಾರ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ನಿರೀಕ್ಷೆ ಇದೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯುತ್ತಿದೆ. ಈ ಹಿಂದೆ ಅಂದರೆ ಒಂದು ವಾರದ ಹಿಂದೆ ತಮ್ಮದೇ ಆದ ಪಕ್ಷ ಸ್ಥಾಪಿಸುವುದಾಗಿ ಅಮರಿಂದರ್ ಸಿಂಗ್ ಅವರು ಹೇಳಿಕೊಂಡಿದ್ದರು.

ಹಾಗೆಯೇ ಕೇಂದ್ರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಹೋರಾಟವನ್ನು ರೈತ ಹಿತಾಸಕ್ತಿಯಿಂದ ಬಗೆಹರಿಸಿದರೆ ಬಿಜೆಪಿಯೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಕೂಡ ಹೇಳಿಕೆ ನೀಡಿದ್ದರು.

ಕಳೆದ ತಿಂಗಳು ಕಾಂಗ್ರೆಸ್‌ ಪಕ್ಷದ ನಿರ್ಧಾರದಿಂದ ದಿಢೀರ್‌ ಪದತ್ಯಾಗ ಮಾಡಿದ ಅಮರಿಂದರ್ ಸಿಂಗ್, ಹೋಳಾಗಿರುವ ಅಕಾಲಿ ಗುಂಪುಗಳಂತಹ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದರು.

SCROLL FOR NEXT