ದೇಶ

ಎನ್ ಸಿಬಿ ಸಾಕ್ಷಿದಾರ ಗೋಸಾವಿ ಶರಣಾಗುವ ವರದಿ ಸುಳ್ಳು, ನಮಗೆ ಯಾವುದೇ ಮಾಹಿತಿ ಬಂದಿಲ್ಲ: ಲಕ್ನೊ ಪೊಲೀಸ್

Sumana Upadhyaya

ಲಕ್ನೊ: ಮುಂಬೈ ಡ್ರಗ್ ಕೇಸಿನಲ್ಲಿ ನಾರ್ಕೊಟಿಕ್ಸ್ ಬ್ಯೂರೊದ ಸಾಕ್ಷಿ ಕೆ ಪಿ ಗೋಸಾವಿ ಅವರು ಉತ್ತರ ಪ್ರದೇಶ ಪೊಲೀಸರಿಗೆ ಶರಣಾಗುತ್ತಾರೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಲಕ್ನೊ ಪೊಲೀಸರು ತಳ್ಳಿಹಾಕಿದ್ದಾರೆ.

ನಿನ್ನೆ ಲಕ್ನೊದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಡಿಯೌನ್ ನ ಸ್ಟೇಷನ್ ಹೌಸ್ ಆಫೀಸರ್(ಎಸ್ ಎಚ್ಒ) ಮನೋಜ್ ಸಿಂಗ್, ನನಗೆ ಈ ಸಂಬಂಧ ಯಾವುದೇ ಕರೆಗಳು ಬಂದಿಲ್ಲ, ನನಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. 

ಇನ್ನು ಪುಣೆ ಪೊಲೀಸ್ ಇಲಾಖೆಯ ಸಹಾಯಕ ಪೊಲೀಸ್ ಆಯುಕ್ತ ಸತೀಶ್ ಗೊವೆಕರ್ ನಿನ್ನೆ ಪ್ರತಿಕ್ರಿಯೆ ನೀಡಿ, ನಮಗೆ ಗೋಸಾವಿ ಶರಣಾಗತಿ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಇನ್ನೂ ಆತನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.

ತಾನು ಮಹಾರಾಷ್ಟ್ರ ಪೊಲೀಸರಿಗೆ ಶರಣಾಗಲಿದ್ದು ನಂತರ ಎಲ್ಲಾ ವದಂತಿಗಳಿಗೆ ತೆರೆ ಬೀಳಲಿದೆ. ಮಹಾರಾಷ್ಟ್ರದ ಹೊರಗೆ ನಾನು ಪೊಲೀಸರಿಗೆ ಶರಣಾಗುತ್ತೇನೆ ಎಂದು ಗೋಸಾವಿ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.

ಕಳೆದ ಅಕ್ಟೋಬರ್ 3ರಂದು ಆರ್ಯನ್ ಖಾನ್ ಬಂಧನ ನಂತರ ಮುಂಬೈಯ ಎನ್ ಸಿಬಿ ಕಚೇರಿಯಲ್ಲಿ ಸೆಲ್ಫಿ ತೆಗೆದು ಗೋಸಾವಿ ಸುದ್ದಿಯಾಗಿದ್ದು ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾರೆ.

SCROLL FOR NEXT