ದೇಶ

ಯುಪಿ ಚುನಾವಣೆ: ಅಖಿಲೇಶ್‌ಗೆ ಎಸ್‌ಬಿಎಸ್‌ಪಿ ಬೆಂಬಲ ನೀಡುತ್ತಿದ್ದಂತೆ, ಏಳು ಪಕ್ಷಗಳ ಬೆಂಬಲ ಪಡೆದುಕೊಂಡ ಬಿಜೆಪಿ

Lingaraj Badiger

ಲಖನೌ: ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ(ಎಸ್‌ಬಿಎಸ್‌ಪಿ) ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಏಳು ಸಣ್ಣ ಪಕ್ಷಗಳ ಗುಂಪು ಬಿಜೆಪಿಗೆ ಬೆಂಬಲ ಘೋಷಿಸಿದೆ.

ಎಸ್‌ಪಿ ಮತ್ತು ಎಸ್‌ಬಿಎಸ್‌ಪಿ ನಾಯಕರು ಬುಧವಾರ ಮೌದಲ್ಲಿ ವೇದಿಕೆ ಹಂಚಿಕೊಂಡಿದ್ದರು ಮತ್ತು 2022ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿದ್ದವು.

ಏತನ್ಮಧ್ಯೆ, ಏಳು ಸಣ್ಣ ಪಕ್ಷಗಳನ್ನು ಒಳಗೊಂಡ 'ಹಿಸ್ಸೆದಾರಿ ಮೋರ್ಚಾ' ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಬುಧವಾರ ಘೋಷಿಸಿದೆ ಎಂದು ಕೇಸರಿ ಪಕ್ಷ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏಳು ಪಕ್ಷಗಳ ನಾಯಕರು ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಿಗೆ ತಮ್ಮ ಬೆಂಬಲ ಪತ್ರವನ್ನು ಹಸ್ತಾಂತರಿಸಿದ್ದಾರೆ.

ಭಾರತೀಯ ಮಾನವ ಸಮಾಜ ಪಕ್ಷದ ಕೇವತ್ ರಾಮಧಾನಿ ಬಿಂದ್, ಮುಸಾಹರ್ ಆಂದೋಲನ ಮಂಚ್‌ನ ಚಂದ್ರ ವನವಾಸಿ ಮತ್ತು ಶೋಷಿತ್ ಸಮಾಜ ಪಕ್ಷದ ಬಾಬುಲಾಲ್ ರಾಜ್‌ಭರ್ ಅವರು ಈ ಏಳು ಪಕ್ಷಗಳ ನಾಯಕರಲ್ಲಿ ಸೇರಿದ್ದಾರೆ.

ಇತರರೆಂದರೆ ಮಾನವ್ ಹಿಟ್ ಪಾರ್ಟಿಯ ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್, ಭಾರತೀಯ ಸುಹೇಲ್ದೇವ್ ಜನತಾ ಪಕ್ಷದ ಭೀಮ್ ರಾಜ್‌ಭರ್, ಪೃಥ್ವಿರಾಜ್ ಜನಶಕ್ತಿ ಪಕ್ಷದ ಚಂದನ್ ಸಿಂಗ್ ಚೌಹಾಣ್ ಮತ್ತು ಭಾರತೀಯ ಸಮತಾ ಸಮಾಜ ಪಕ್ಷದ ಮಹೇಂದ್ರ ಪ್ರಜಾಪತಿ.

SCROLL FOR NEXT