ದೇಶ

ಮಾನನಷ್ಟ ಪ್ರಕರಣ, ಸಂಜಯ್ ನಿರುಪಮ್‌ಗೆ ಬೇಷರತ್ ಕ್ಷಮೆಯಾಚಿಸಿದ ಮಾಜಿ ಸಿಎಜಿ ವಿನೋದ್ ರಾಯ್

Nagaraja AB

ನವದೆಹಲಿ: ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮಾಜಿ ಸಿಎಜಿ ವಿನೋದ್ ರಾಯ್ ಗುರುವಾರ ಕ್ಷಮೆಯಾಚಿಸಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

ಪಾಟಿಯಾಲ್ ಹೌಸ್ ನ ಎಂಎಂ ಕೋರ್ಟ್ ನಲ್ಲಿ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಕೊನೆಗೂ ಮಾಜಿ ಸಿಎಜಿ ವಿನೋದ್ ರಾಯ್ ನನಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಯುಪಿಎ ಸರ್ಕಾರದಿಂದ ಮಾಡಿದು ಎನ್ನಲಾದ 2ಜಿ ಮತ್ತು ಕಲ್ಲಿದ್ದಲು ನಿಕ್ಷೇಪಗಳ ಬಗೆಗಿನ ಎಲ್ಲಾ ನಕಲಿ ವರದಿಗಳಿಗಾಗಿ ಈಗ ಅವರು ರಾಷ್ಟ್ರದ ಕ್ಷಮೆಯಾಚಿಸಬೇಕೆಂದು ಸಂಜಯ್ ನಿರುಪಮ್ ಹೇಳಿದರು.

2015ರಲ್ಲಿ ವಿನೋದ್‌ ರಾಯ್‌ ಬರೆದಿರುವ ಪುಸ್ತಕಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಕುರಿತು ತನಿಖೆ ನಡೆಸುತ್ತಿದ್ದಾಗ ಕಾಂಗ್ರೆಸ್‌ ಮುಖಂಡ ಸಂಜಯ್‌ ನಿರುಪಮ್‌ ತಮ್ಮನ್ನು ಭೇಟಿ ಮಾಡಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೆಸರನ್ನು ಉಲ್ಲೇಖಿಸಬೇಡಿ ಎಂದು ಹೇಳಿದ್ದರು ಎಂದು ಆ ಪುಸ್ತಕದ ಪ್ರಚಾರದ ವೇಳೆ ಆರೋಪಿಸಲಾಗಿತ್ತು.

ಇದು ಸಂಪೂರ್ಣ ಸುಳ್ಳು, ತನ್ನ ಹೇಳಿಕೆಯನ್ನು ವಾಪಸ್ ಪಡೆಯುವಂತೆ ವಿನೋದ್ ರಾಯ್ ಗೆ ಮೊದಲಿಗೆ ಹೇಳಲಾಗಿತ್ತು. ಆದರೆ, ಆ ರೀತಿ ಮಾಡದ ಕಾರಣ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಮಾನ ನಷ್ಟ ಕೇಸ್ ದಾಖಲಿಸಲಾಗಿತ್ತು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ತಿಳಿಸಿದರು.

ನನ್ನ ಹೇಳಿಕೆಯಿಂದ ಸಂಜಯ್ ನಿರುಪಮ್ ಹಾಗೂ ಅವರ ಕುಟುಂಬ, ಹಿತೈಷಿಗಳಿಗೆ ನೋವು, ಸಂಕಟವಾಗಿರುವುದು ನನಗೆ ಅರ್ಥವಾಗಿದೆ. ಅದಕ್ಕಾಗಿ ನಾನು ಬೇಷರತ್ ಕ್ಷಮೆಯಾಚಿಸುವುದಾಗಿ ವಿನೋದ್ ರಾಯ್ ತಮ್ಮ ಅಫಿಢವಿಟ್ ನಲ್ಲಿ ಹೇಳಿದ್ದಾರೆ. 

2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ 2ಜಿ ತರಂಗಾಂತರ ಹಂಚಿಕೆ ಪ್ರಕರಣದಲ್ಲಿ ಎ ರಾಜಾ ಮತ್ತು ಕನಿಮೊಳಿ ಸೇರಿದಂತೆ ಎಲ್ಲಾ 18 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

SCROLL FOR NEXT