ದೇಶ

ಐಆರ್‏ಸಿಟಿಸಿ ಯೊಂದಿಗೆ 50:50 ಆದಾಯ ಹಂಚಿಕೆ ಆದೇಶ ಹಿಂಪಡೆದ ಕೇಂದ್ರ

Sumana Upadhyaya

ನವದೆಹಲಿ:  ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಸಂಗ್ರಹಿಸಿದ ಕನ್ವಿನಿಯನ್ಸ್ ಶುಲ್ಕ ಗಳಿಸಿದ ಆದಾಯವನ್ನು ನವೆಂಬರ್ 1 ರಿಂದ 50:50 ಅನುಪಾತದಲ್ಲಿ ಹಂಚಿಕೊಳ್ಳುವ ನಿರ್ಧಾರವನ್ನು ರೈಲ್ವೆ ಸಚಿವಾಲಯ ಹಿಂಪಡೆದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದ ದಿನದ ವಹಿವಾಟಿನಲ್ಲಿ 650.10ರೂಪಾಯಿಗೆ ಕುಸಿತಕಂಡು ಐಆರ್ ಸಿಟಿಸಿಯ ಷೇರುಗಳು ಶೇಕಡಾ 29ಕ್ಕೆ ಇಳಿದ ನಂತರ ಈ ನಿರ್ಧಾರವನ್ನು ಮಾಡಲಾಗಿದೆ. ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿಯು ರೈಲ್ವೇ ಸಚಿವಾಲಯವು ತಾನು ಗಳಿಸುವ ಎಲ್ಲಾ ಕನ್ವಿನಿಯನ್ಸ್ ಶುಲ್ಕ ಆದಾಯದಲ್ಲಿ ಅರ್ಧದಷ್ಟು ಭಾಗವನ್ನು ಹಂಚಿಕೊಳ್ಳಲು ಕೇಳಿಕೊಂಡಿದೆ ಎಂದು ವಿನಿಮಯ ಕೇಂದ್ರಗಳಿಗೆ ತಿಳಿಸಿದ ನಂತರ ದೊಡ್ಡ ಕುಸಿತ ಸಂಭವಿಸಿದೆ.

ಈ ಹಿಂಪಡೆಯುವಿಕೆಯ ನಂತರ, ಐಆರ್ ಸಿಟಿಸಿಯ ಪಾಲು ಅದರ ದಿನದ ವಹಿವಾಟಿಗಿಂತ ನಿನ್ನೆ ಗುರುವಾರ ಅಪರಾಹ್ನ ಮುಕ್ತಾಯವಾದ ದಿನದ ವಹಿವಾಟಿಗಿಂತ ಶೇಕಡಾ 5ರಷ್ಟು ಕಡಿಮೆಯಾಗಿದೆ. 

ವಿಶ್ಲೇಷಕರು ಹೇಳುವ ಪ್ರಕಾರ, ಐಆರ್ ಸಿಟಿಸಿಯ ಈ ಅನುಕೂಲಕರ ಶುಲ್ಕವನ್ನು ಹಂಚಿಕೊಳ್ಳುವ ನಿರ್ಧಾರ ಅದರ ಷೇರುದಾರರ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ.

ಸ್ವಸ್ತಿಕ ಇನ್ವೆಸ್ಟ್ ಮಾರ್ಟ್ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ, ಈ ನಿರ್ಧಾರದಿಂದ ಐಆರ್ ಸಿಟಿಸಿಯ ಷೇರುಗಳ ಮೇಲೆ ಹೊಡೆತ ಬೀಳಲಿದ್ದು ಇತರ ಸಾರ್ವಜನಿಕ ಷೇರುಗಳ ಮೇಲೆ ಕೂಡ ಪರಿಣಾಮ ಬೀರಲಿದೆ. 

ಐಆರ್ ಸಿಟಿಸಿ ರೈಲುಗಳಲ್ಲಿ ಆಹಾರ ಸೇವೆಗಳನ್ನು ನಿರ್ವಹಿಸುವ ಏಕೈಕ ಕಂಪನಿಯಾಗಿದ್ದು, ಭಾರತೀಯ ರೈಲ್ವೆಗಾಗಿ ಆನ್‌ಲೈನ್ ಟಿಕೆಟಿಂಗ್ ಮತ್ತು ಅಡುಗೆ ಸೇವೆಗಳಲ್ಲಿ ಏಕಸ್ವಾಮ್ಯವನ್ನು ಹೊಂದಿದೆ. ಈ ವರ್ಷ ಭಾರತೀಯ ವಿನಿಮಯ ಕೇಂದ್ರಗಳಲ್ಲಿ ಐಟಿಸಿಯ ಷೇರುಗಳು ಅತ್ಯುತ್ತಮ ವಹಿವಾಟು ನೀಡಿದ ಷೇರುಗಳಲ್ಲಿ ಒಂದಾಗಿದೆ. 

SCROLL FOR NEXT