ದೇಶ

ಭಾರತೀಯ ನೌಕಾಪಡೆಗೆ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ ಸೇರ್ಪಡೆ

Lingaraj Badiger

ಮುಂಬೈ: ಭಾರತೀಯ ನೌಕಾಪಡೆಗೆ ಮುಂಬೈನ ನೌಕಾ ಹೆಲಿಕಾಪ್ಟರ್ ಬೇಸ್ ಐಎನ್​ಎಸ್​ ಶಿಕ್ರಾದಲ್ಲಿ ಶುಕ್ರವಾರ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು(ALH) MK III ಸೇರ್ಪಡೆಗೊಂಡಿವೆ.

ಭಾರತೀಯ ನೌಕಾಪಡೆಯ ಪ್ರಕಾರ, ಪ್ರಸ್ತುತ, 321 ವಿಮಾನವು ಚೇತಕ್ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿದೆ, ಇವುಗಳನ್ನು ಹಂತಹಂತವಾಗಿ ಹೆಚ್ಚು ಸಮರ್ಥ ಮತ್ತು ಬಹುಮುಖ ALH MK III ವಿಮಾನಗಳಾಗಿ ಬದಲಾಯಿಸಲಾಗುವುದು, ಅವುಗಳು ಅತ್ಯಾಧುನಿಕ ಕಣ್ಗಾವಲು, ಸಂವಹನ, ಸುರಕ್ಷಾ ಸಾಧನಗಳನ್ನು ಹೊಂದಿವೆ. ಸಮುದ್ರದಲ್ಲಿ ಮತ್ತು ತೀರದಲ್ಲಿ ಹೆಚ್ಚು ಕಾರ್ಯಕ್ಷಮತೆ ಹೊಂದಿರಲಿವೆ.

ನೌಕಪಡೆಯ ಉಪ ಮುಖ್ಯಸ್ಥ ಪಶ್ಚಿಮ ನೌಕಾ ಕಮಾಂಡರ್​ನ ಕಮಾಂಡರ್​ ಇನ್​ ಚೀಫ್​ ಆರ್​ ಹರಿಕುಮಾರ್​ ಈ ವೇಳೆ ಭಾಗವಹಿಸಿದ್ದರು.

ಈ ಹೊಸದಾಗಿ ಸೇರ್ಪಡೆಗೊಂಡ ALH MK III ಹೆಲಿಕಾಪ್ಟರ್‌ಗಳು ಮುಂಬೈನಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯಗಳಿಗೆ ಇನ್ನಷ್ಟು ಬಲ ನೀಡಲಿವೆ ಎಂದು ಹರಿಕುಮಾರ್ ಅವರು ಹೇಳಿದ್ದಾರೆ.

SCROLL FOR NEXT