ಸಾಂಕೇತಿಕ ಚಿತ್ರ 
ದೇಶ

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು; ಶಾಲೆಗೆ ದೆಹಲಿ ಹೈಕೋರ್ಟ್ ನೊಟೀಸ್

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ. 

ನವದೆಹಲಿ: ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ. 

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ 70,000 ರೂಪಾಯಿ ನೀಡುವುದಕ್ಕೆ ಮುಖ್ಯೋಪಾಧ್ಯಯರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಶಾಲೆ ಶಿಸ್ತು ಕ್ರಮ ಜರುಗಿಸಿ ಅಮಾನತುಗೊಳಿಸಿತ್ತು. 

ಆರ್ ಎಸ್ ಎಸ್ ನ ಟ್ರಸ್ಟ್ ಆಗಿರುವ ಸಮರ್ಥ ಶಿಕ್ಷಾ ಸಮಿತಿ ಹಾಗೂ ದೆಹಲಿ ಸರ್ಕಾರದ ಶಿಕ್ಷಣ ನಿರ್ದೇಶನಾಲಯದಿಂದ ಈ  ಶಾಲೆಯನ್ನು ನಡೆಸಲಾಗುತ್ತಿತ್ತು. ಈ ಟ್ರಸ್ಟ್ ನಿಂದ ನಡೆಸಲಾಗುತ್ತಿರುವ ಶಾಲೆಗಳಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 70,000- 1,00,000 ರೂಪಾಯಿ ದೇಣಿಗೆ ಸಂಗ್ರಹಿಸುವುದಕ್ಕೆ ಟಾರ್ಗೆಟ್ ನೀಡಲಾಗಿತ್ತು.

ಇದಿಷ್ಟೇ ಅಲ್ಲದೇ ದೇಣಿಗೆ ಸಂಗ್ರಹಕ್ಕಾಗಿ ಸಿಬ್ಬಂದಿಗಳಿಗೂ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳು, ಪೋಷಕರಿಂದ ದೇಣಿಗೆ ಸಂಗ್ರಹ, ಮಾರ್ಕೆಟ್ ಗಳಿಗೆ ತೆರಳಿ ಅಥವಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡುವಂತೆ ಶಾಲೆಯ ಆಡಳಿತ ಮಂಡಳಿ ಸೂಚನೆ ನೀಡಿತ್ತು.  ಇದರ ಹೊರತಾಗಿ ಶಾಲೆಯ ಶಿಕ್ಷಕರಿಂದ ತಲಾ 15,000 ರೂಪಾಯಿ ದೇಣಿಗೆಯನ್ನು ಮಂದಿರ ನಿರ್ಮಾಣದ ಸಮರ್ಪಣ ನಿಧಿ ಫಂಡ್ ಗೆ ಸಂಗ್ರಹಿಸಲು ಶಾಲೆಯ ಆಡಳಿತ ಮಂಡಳಿ ಮುಂದಾಗಿತ್ತು. 

ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ರಿಟ್ ಅರ್ಜಿಯನ್ನು ದಾಖಲಿಸಿ ಘಟನೆಯನ್ನು ವಿವರಿಸಿದ್ದರು. ತಮ್ಮ ಪತಿ 2016 ರಲ್ಲಿ ಅಪಘಾತಕ್ಕೆ ಒಳಗಾದಾಗಿನಿಂದಲೂ ತಾವು ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದರು, ಆದರೂ ಮಂದಿರ ನಿರ್ಮಾಣಕ್ಕಾಗಿ 2,100 ರೂಪಾಯಿಗಳನ್ನು ನೀಡಿದ್ದರು, ಆದರೆ 15,000 ರೂಪಾಯಿ ನೀಡುವುದಕ್ಕೆ ಸಾಧ್ಯವಾಗಿಲ್ಲದ ಕಾರಣ ನಿರಾಕರಿಸಿದ್ದರು. ನಿಗದಿತ ಹಣವನ್ನು ನೀಡದೇ ಇದ್ದ ದಿನದಿಂದಲೂ ಶಾಲೆಯಲ್ಲಿ ಸಮರ್ಥ ಶಿಕ್ಷಾ ಸಮಿತಿ ಪ್ರತೀಕಾರದ ನಡೆಯನ್ನು ಅನುಸರಿಸುತ್ತಿತ್ತು. ಮುಖ್ಯೋಪಾಧ್ಯಾಯರಿಗೆ ಕಿರುಕುಳ ನೀಡಲು ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿತ್ತು, ಈ ರೀತಿ ಮಾಡುವುದರಿಂದ ಆಕೆಯೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಬೇಕು ಅಥವಾ ಅವರನ್ನು ತೆಗೆದುಹಾಕುವಂತಾಗಬೇಕು" ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಆರ್ಥಿಕ ಮುಗ್ಗಟ್ಟು, ಮಾನಸಿಕ ಕಿರಿಕಿರಿಯನ್ನು ತಾಳಲಾರದೇ ಶಿಕ್ಷಣ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ದೆಹಲಿ ಸಿಎಂಗೂ ಪತ್ರ ಬರೆದಿದ್ದರು. ಈ ಬಳಿಕ ಶಾಲೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು. ಈ ಬೆಳವಣಿಗೆಗಳ ಬಳಿಕ ಶಾಲೆಯ ಆಡಳಿತ ಮಂಡಳಿ ಆಕೆಯನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಯಾವುದೇ ನೋವಿಲ್ಲ, ಮನಃಪೂರ್ವಕವಾಗಿ ರಾಜೀನಾಮೆ ನೀಡುತ್ತಿದ್ದೇನೆ; ಸಿದ್ದರಾಮಯ್ಯ ಘೋಷಣೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT