ದೇಶ

ಪದ್ಮ ಪ್ರಶಸ್ತಿಗಾಗಿ ಪ್ರತಿಭಾವಂತ ಸಾಧಕರನ್ನು ಗುರುತಿಸಿ: ದೇಶದ ಜನತೆಗೆ ಕೇಂದ್ರ ಮನವಿ

Lingaraj Badiger

ನವದೆಹಲಿ: ಪದ್ಮ ಪ್ರಶಸ್ತಿಗಾಗಿ ನಿಜವಾಗಿಯೂ ಶ್ರೇಷ್ಠತೆ ಮತ್ತು ಸಾಧನೆಗೆ ಅರ್ಹರಾಗಿರುವ ಪ್ರತಿಭಾವಂತ ವ್ಯಕ್ತಿಗಳ ಹೆಸರನ್ನು ಗುರುತಿಸಿ ಶಿಫಾರಸು ಮಾಡುವಂತೆ ಕೇಂದ್ರ ಸರ್ಕಾರ ಬುಧವಾರ ದೇಶದ ನಾಗರಿಕರಿಗೆ ಮನವಿ ಮಾಡಿದೆ.

ಕೇಂದ್ರ ಗೃಹ ಸಚಿವಾಲಯವು ಗಣರಾಜ್ಯೋತ್ಸವದ ಮುನ್ನಾದಿನ ಘೋಷಿಸಲಾಗುವ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಗೆ ಆನ್‌ಲೈನ್ ನಾಮನಿರ್ದೇಶನ ಅಥವಾ ಶಿಫಾರಸುಗಳನ್ನು ಆಹ್ವಾನಿಸಿದ್ದು, ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪದ್ಮ ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗಳು ಅಥವಾ ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಪದ್ಮ ಪ್ರಶಸ್ತಿ ಪೋರ್ಟಲ್ HYPERLINK "https://padmaawards.gov.in/" ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.

ಪದ್ಮ ಪ್ರಶಸ್ತಿಗಳನ್ನು 'ಜನರ ಪದ್ಮ'ವಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ. ಆದ್ದರಿಂದ ಮಹಿಳೆಯರು, ಎಸ್‌ಸಿ, ಎಸ್‌ಟಿ, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಎಲ್ಲ ನಾಗರಿಕರಿಗೆ ಕೇಂದ್ರ ಸರ್ಕಾರ ವಿನಂತಿಸಿದೆ.

SCROLL FOR NEXT