ಮಕ್ಕಳ ಆರೋಗ್ಯ ವಿಚಾರಿಸುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ 
ದೇಶ

ಉತ್ತರ ಪ್ರದೇಶ: 10 ದಿನದಲ್ಲಿ 'ನಿಗೂಢ ಜ್ವರ' ದಿಂದ 30 ಮಕ್ಕಳು ಸಾವು, ತಜ್ಞರ ತಂಡ ರವಾನಿಸಿದ ಕೇಂದ್ರ

ಉತ್ತರ ಪ್ರದೇಶದ ಫಿರೋಜಾಬಾದ್‌ ನಲ್ಲಿ ಕಳೆದ 10 ದಿನದಲ್ಲಿ 'ನಿಗೂಢ ಜ್ವರ'ದಿಂದ 30 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ರೋಗ ನಿಯಂತ್ರಣ...

ನವದೆಹಲಿ: ಉತ್ತರ ಪ್ರದೇಶದ ಫಿರೋಜಾಬಾದ್‌ ನಲ್ಲಿ ಕಳೆದ 10 ದಿನದಲ್ಲಿ 'ನಿಗೂಢ ಜ್ವರ'ದಿಂದ 30 ಮಕ್ಕಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಫಿರೋಜಾಬಾದ್‌ಗೆ ಒಂದು ತಜ್ಞರ ತಂಡವನ್ನು ಕಳುಹಿಸಿದೆ.

ಫಿರೋಜಾಬಾದ್ ಜಿಲ್ಲೆಯು ಪ್ರಸ್ತುತ ಈ ರೋಗವನ್ನು ಜ್ವರ, ದೇಹದ ನೋವು, ತಲೆನೋವು, ನಿರ್ಜಲೀಕರಣ, ಪ್ಲೇಟ್ಲೆಟ್ ಎಣಿಕೆಯಲ್ಲಿ ಕ್ಷಿಪ್ರ ಇಳಿಕೆ, ಹೊಟ್ಟೆ ನೋವು ಮತ್ತು ಕೆಲವು ಸಂದರ್ಭಗಳಲ್ಲಿ ಡೆಂಗ್ಯೂ ತರಹದ ರೋಗಲಕ್ಷಣಗಳನ್ನು ಹೊಂದಿರುವ ವೈರಲ್ ಜ್ವರ ಎಂದು ಪರಿಗಣಿಸುತ್ತಿದೆ.

ಗುರುತಿಸಲಾಗದ ಕಾಯಿಲೆಯಿಂದ ಸಾವನ್ನಪ್ಪಿದ ಕೆಲವು ಮಕ್ಕಳು ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ. ಆದರೆ ಯಾವುದೇ ಮಕ್ಕಳಿಗೂ ಕೋವಿಡ್ ಪಾಸಿಟಿವ್ ಬಂದಿಲ್ಲ ಎಂದು ವರದಿಯಾಗಿದೆ.

ಕೆಲವು ಪ್ರಕರಣಗಳು ಮತ್ತು ಕೆಲವು ಸಾವುಗಳು ಪಕ್ಕದ ಜಿಲ್ಲೆಗಳಿಂದ ವರದಿಯಾಗಿವೆ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. 

ಏಕಾಏಕಿ ಕಾಣಿಸಿಕೊಂಡಿರುವ ಈ ನಿಗೂಢ ಜ್ವರ ಫಿರೋಜಾಬಾದ್ ಜಿಲ್ಲೆಯ ಹಲವಾರು ಗ್ರಾಮಗಳ ಮೇಲೆ ಪರಿಣಾಮ ಬೀರಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ಮತ್ತು ಸಾವನ್ನಪ್ಪಿದವರ ಮಾದರಿಗಳನ್ನು ಲಖನೌ ಮತ್ತು ಐಸಿಎಂಆರ್ ಅಡಿಯಲ್ಲಿ ಬರುವ ಪುಣೆ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಹೆಚ್ಚಿನ ತನಿಖೆಗಾಗಿ ಕಳುಹಿಸಲಾಗಿದೆ. ಕೆಲವು ವೈದ್ಯರು ಇದು ಡೆಂಗ್ಯೂನ ಹೊಸ ತಳಿ ಆಗಿರಬಹುದು ಎಂದು ಊಹಿಸುತ್ತಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!