ಭೂಪೇಶ್ ಬಗೇಲಾ 
ದೇಶ

ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಛತ್ತೀಸ್ ಗಢ ಮುಖ್ಯಮಂತ್ರಿ ತಂದೆಯ ಬಂಧನ!

ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಅವರು ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಏಕಾಏಕಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಯ್‌ ಪುರ್‌: ಬ್ರಾಹ್ಮಣ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಅವರು ವಿರುದ್ಧ ಪ್ರಕರಣ ದಾಖಲಾಗಿದ್ದು ಇಂದು ಏಕಾಏಕಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಭೂಪೇಶ್ ಬಘೇಲ್‌ ಅವರ ತಂದೆ ನಂದ್ ಕುಮಾರ್ ಬಘೇಲ್ ಅವರನ್ನು ಬಂಧಿಸಿದ ಪೊಲೀಸರು ರಾಯಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ನಂದ ಕುಮಾರ್ ಬಘೇಲ್‌ ಕೆಲವು ದಿನಗಳ ಹಿಂದೆ ರಾಯಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಬ್ರಾಹ್ಮಣರು ಗ್ರಾಮಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದರು. ದೇಶದ ಎಲ್ಲ ಗ್ರಾಮೀಣ ಜನರಿಗೆ ನನ್ನ ಕೋರಿಕೆ ಇಷ್ಟೆ . ಬ್ರಾಹ್ಮಣರು ನಿಮ್ಮ ಗ್ರಾಮಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ನಂದ ಕುಮಾರ್ ಬಘೇಲ್‌ ಮನವಿ ಮಾಡಿದ್ದರು. ಇತರ ಸಮಾಜದ ಜನರೊಂದಿಗೆ ತಾವು ಈ ವಿಷಯವಾಗಿ ಮಾತನಾಡುವುದಾಗಿ. ಎಲ್ಲರೂ ಒಗ್ಗೂಡಿ ಬ್ರಾಹ್ಮಣರನ್ನು ಗ್ರಾಮಗಳಿಂದ ಬಹಿಷ್ಕರಿಸೋಣ ಎಂದು ಕರೆ ನೀಡಿದ್ದರು.

ವೋಲ್ಗಾ ನದಿಯ ತೀರಕ್ಕೆ ಅವರನ್ನು ವಾಪಸ್ ಕಳುಹಿಸಬೇಕಾದ ಅಗತ್ಯವಿದೆ ಎಂಬ ನಂದ್ ಕುಮಾರ್ ಅವರ ಹೇಳಿಕೆ, ಬ್ರಾಹ್ಮಣ ಸಮುದಾಯವನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ರಾಜ್ಯವೊಂದರ ಮುಖ್ಯಮಂತ್ರಿಯ ತಂದೆಯಾಗಿ, ಒಂದು ಸಮಾಜವನ್ನು ಬಹಿಷ್ಕರಿಸುವಂತೆ ಜವಬ್ದಾರಿಇಲ್ಲದೆ.. ದ್ವೇಷ ಪೂರಿತವಾಗಿ ಮಾತನಾಡಿರುವುದು ಎಷ್ಟು ಸರಿ ಎಂದು ಬ್ರಾಹ್ಮಣರು, ಬ್ರಾಹ್ಮಣ ಸಂಘಗಳು, ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿ ಡಿ ನಗರ್‌ ಪೊಲೀಸ್‌ ಠಾಣೆಗೆ 'ಸರ್ವ ಬ್ರಾಹ್ಮಣ ಸಮಾಜದ' ಸದಸ್ಯರು ದೂರು ದಾಖಲಿಸಿದ್ದರು.

ಬ್ರಾಹ್ಮಣ ಸಮುದಾಯದ ದೂರಿನ ಹಿನ್ನಲೆಯಲ್ಲಿ ಡಿ ಡಿ ನಗರ ಪೊಲೀಸ್ ಠಾಣೆಯ ಪ್ರಭಾರಿ ಯೋಗಿತಾ ಕಪರ್ಡೆ ಪ್ರತಿಕ್ರಿಯಿಸಿ, ನಂದಕುಮಾರ್ ಬಘೇಲ್‌ ನೀಡಿರುವ ಹೇಳಿಕೆಗಳಿಗೆ ಬ್ರಾಹ್ಮಣ ಸಮುದಾಯ ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದೆ. ಅವರ ಹೇಳಿಕೆಗಳು ಸಮಾಜದಲ್ಲಿ ದ್ವೇಷವನ್ನು ಪ್ರಚೋದಿಸುವ ಗುರಿಯನ್ನು ಹೊಂದಿವೆ ಎಂದು ಎಂದು ಯೋಗಿತಾ ಕಪರ್ಡೆ ಹೇಳಿದ್ದಾರೆ. ಇನ್ನೂ ಮುಖ್ಯಮಂತ್ರಿ ಬಘೇಲ್‌ ಕೂಡಾ ತಮ್ಮ ತಂದೆಯನ್ನು ಒಬ್ಬ ಮಗನಾಗಿ ಗೌರವಿಸುತ್ತೇನೆ. ಆದರೆ ಮುಖ್ಯಮಂತ್ರಿಯಾಗಿ ಅವರ ತಪ್ಪುಗಳನ್ನು ಒಪ್ಪಿಕೊಳ್ಳಲಿಲ್ಲ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT