ದೇಶ

ಕಾಶ್ಮೀರ ಸಹಜಸ್ಥಿತಿ ಬಟಾಬಯಲಾಗಿದ್ದು, ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ: ಮೆಹಮೂಬಾ ಮುಫ್ತಿ

Srinivasamurthy VN

ಶ್ರೀನಗರ: ನನ್ನನ್ನು ಮತ್ತೆ ಗೃಹ ಬಂಧನದಲ್ಲಿರಿಸಲಾಗಿದ್ದು, ಆ ಮೂಲಕ ಜಮ್ಮು-ಕಾಶ್ಮೀರದ ಸಹಜಸ್ಥಿತಿ ಬಟಾಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಮೂಬಾ ಮುಫ್ತಿ  ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 'ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆ. ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ಬಳಿಕ ಸಹಜ ಸ್ಥಿತಿಗೆ ಮರಳಿದೆ ಎಂಬ ನಕಲಿ ವಾದವು ಈಗ ಬಯಲಾಗಿದೆ.  ಭಾರತ ಸರ್ಕಾರವು ಅಫ್ಘಾನ್ ಜನರ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಕಾಶ್ಮೀರಿಗಳಿಗೆ ಹಕ್ಕುಗಳನ್ನುನಿರಾಕರಿಸುತ್ತಿದೆ. ಜಮ್ಮು-ಕಾಶ್ಮಿರದ ಆಡಳಿತದ ಪ್ರಕಾರ ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರದ ಕಾರಣ ನನ್ನನ್ನು ಇಂದು ಗೃಹಬಂಧನದಲ್ಲಿರಿಸಲಾಗಿದೆ. ಇದು ಅವರ ಕೇಂದ್ರಾಡಳಿತ ಪ್ರದೇಶವು ಸಹಜತೆಗೆ ಮರಳಿದೆ ಎಂಬ ನಕಲಿ ಪ್ರತಿಪಾದನೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ. 

ಇನ್ನು ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂಟರ್ನೆಟ್ ನಿರ್ಬಂಧವನ್ನು ಒಳಗೊಂಡಂತೆ ಹೆಚ್ಚಿನ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಕಾಶ್ಮೀರ ಮತ್ತು ಜಮ್ಮುವಿನ ಎರಡೂ ಪ್ರದೇಶಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಮಾಜಿ ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿಯವರ ನಿಧನದ ನಂತರ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. 

SCROLL FOR NEXT