ದೇಶ

ಉತ್ತರಪ್ರದೇಶ: ಕೃಷ್ಣ ಜನ್ಮಭೂಮಿಯನ್ನು ತೀರ್ಥಕ್ಷೇತ್ರವೆಂದು ಘೋಷಣೆ: ಮಾಂಸ, ಮಧ್ಯ ನಿಷೇಧ

Vishwanath S

ಲಖನೌ: ಮಥುರಾದ ಕೃಷ್ಣ ಜನ್ಮಭೂಮಿಯನ್ನು ತೀರ್ಥಕ್ಷೇತ್ರವೆಂದು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ.

ಅಲ್ಲದೆ ವೃಂದಾವನದ ಸುತ್ತಲ 10 ಚದರ ಕಿ.ಮೀ ಪ್ರದೇಶದಲ್ಲಿ ಮಧ್ಯ-ಮಾಂಸ ಮಾರಾಟವನ್ನು ನಿಷೇಧಿಸಲಾಗಿದ್ದು ಆ ರೀತಿ 22 ಮುನ್ಸಿಪಲ್ ವಾರ್ಡ್ ಗಳಲ್ಲಿ ನಿಷೇಧ ಹೇರಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇದ ಹೇರಿತ್ತು.

ಮಥುರಾ ಜಿಲ್ಲಾಡಳಿತಕ್ಕೆ ಶ್ರೀಕೃಷ್ಣನ ನಾಡಿನ ಏಳು ಹಿಂದೂ ತೀರ್ಥಕ್ಷೇತ್ರಗಳ ಸುತ್ತಮುತ್ತ ಮಾಂಸ ಮತ್ತು ಮದ್ಯವನ್ನು ನಿಷೇಧಿಸುವ ಕೆಲಸ ಮಾಡುವಂತೆ ಸಿಎಂ ಸೂಚಿಸಿದ್ದರು. ಈ ತೀರ್ಥಕ್ಷೇತ್ರಗಳ ಬಳಿ ಮದ್ಯ ಮತ್ತು ಮಾಂಸದ ವ್ಯಾಪಾರದಲ್ಲಿ ತೊಡಗಿರುವವರನ್ನು ಸ್ಥಳಾಂತರಿಸುವ ಮತ್ತು ಪುನರ್ವಸತಿ ಕಲ್ಪಿಸುವ ಭರವಸೆಯನ್ನೂ ನೀಡಿದರು.

ಜನ್ಮಾಷ್ಟಮಿಯ ದಿನದಂದು ಮುಖ್ಯಮಂತ್ರಿ ಮಾಡಿದ ಘೋಷಣೆಗೆ ಅನುಗುಣವಾಗಿ, ಶ್ರೀ ಕೃಷ್ಣ ಜನ್ಮಭೂಮಿಯ ಸುತ್ತಮುತ್ತಲಿನ 22 ವಾರ್ಡ್‌ಗಳನ್ನು ಒಳಗೊಂಡ ಪ್ರದೇಶಗಳನ್ನು ಯಾತ್ರಾಸ್ಥಳವೆಂದು ಘೋಷಿಸಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ಪರಿಣಾಮವಾಗಿ, ಈ ಅಧಿಸೂಚಿತ ಪ್ರದೇಶದಲ್ಲಿ ಮದ್ಯ ಮತ್ತು ಮಾಂಸ ವ್ಯಾಪಾರ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ನವನೀತ್ ಚಾಹಲ್ ಹೇಳಿದರು.

SCROLL FOR NEXT