ದೇಶ

ಎಸ್ ಸಿ/ಎಸ್ ಟಿ ಬಡ್ತಿ ಮೀಸಲು ಆದೇಶ ಮರುಪರಿಶೀಲನೆ ಇಲ್ಲ: ಸುಪ್ರೀಂ ಕೋರ್ಟ್

Srinivas Rao BV

ನವದೆಹಲಿ: ಎಸ್ ಸಿ/ಎಸ್ ಟಿ ಬಡ್ತಿ ಮೀಸಲು ಆದೇಶವನ್ನು ಮತ್ತೆ ಪರಿಶೀಲನೆ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋರ್ಟ್ ಆದೇಶವನ್ನು ಜಾರಿಗೊಳಿಸುವುದು ಹೇಗೆ ಎಂಬುದು ರಾಜ್ಯಗಳು ನಿರ್ಧರಿಸಬೇಕೆಂದು ಕೋರ್ಟ್ ಹೇಳಿದೆ.

ಹಲವು ರಾಜ್ಯಗಳಲ್ಲಿ ಎಸ್ ಸಿ/ಎಸ್ ಟಿ ಗಳಿಗೆ ಬಡ್ತಿ ನೀಡುವುದಕ್ಕೆ ಉಂಟಾಗಿರುವ ಸಮಸ್ಯೆಗಳನ್ನು ಉಲ್ಲೇಖಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ನಾಗೇಶ್ವರ್ ರಾವ್ ಅವರಿದ್ದ ಪೀಠ ರಾಜ್ಯ ಸರ್ಕಾರಗಳ ಪರ ವಕೀಲರಿಗೆ, ಆದೇಶ ಜಾರಿಗೊಳಿಸುವುದಕ್ಕೆ ಎದುರಾಗುತ್ತಿರುವ ವಿಶಿಷ್ಟವಾದ ಸಮಸ್ಯೆಗಳನ್ನು ಗುರುತಿಸಿ ಎರಡು ವಾರಗಳಲ್ಲಿ ಸಲ್ಲಿಸಲು ಸೂಚಿಸಿದೆ.

ನಾಗರಾಜ್ ಅಥವಾ ಜರ್ನೈಲ್ ಸಿಂಗ್ (ಪ್ರಕರಣಗಳನ್ನು) ಮತ್ತೆ ಕೈಗೆತ್ತಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ, ಏಕೆಂದರೆ ಈ ಪ್ರಕರಣಗಳು ಕೋರ್ಟ್ ನ ಕಾನೂನಿನ ಅನುಗುಣವಾಗಿದೆಯೇ? ಇಲ್ಲವೇ? ಎಂಬುದನ್ನು ನಿರ್ಧರಿಸುವುದು ಮಾತ್ರ ಉದ್ದೇಶವಾಗಿತ್ತು ಎಂದು ನ್ಯಾ. ಸಂಜೀವ್ ಖನ್ನಾ ಹಾಗೂ ಬಿಆರ್ ಗವಾಯಿ ಅವರಿದ್ದ ಪೀಠ ಹೇಳಿದೆ.

ಕೋರ್ಟ್ ಇದೇ ವೇಳೆ ತನ್ನ ಹಿಂದಿನ ಆದೇಶವನ್ನು ಉಲ್ಲೇಖಿಸಿದ್ದು, " ರಾಜ್ಯ ಸರ್ಕಾರಗಳು ತಮಗೆ ಎದುರಾಗುತ್ತಿರುವ ವಿಶಿಷ್ಟ ಸಮಸ್ಯೆಗಳ ವಿವರಗಳನ್ನು ಸಲ್ಲಿಸಿದರೆ ಆ ವಿಷಯವಾಗಿ ಮುನ್ನಡೆಯಬಹುದು ಎಂದು ಹೇಳಿದ್ದಾಗಿ ತಿಳಿಸಿದೆ.

ನಾಗರಾಜ್ ಪ್ರಕರಣದಲ್ಲಿ ಕೆಲವೊಂದು ವಿಷಯಗಳನ್ನು ಇತ್ಯರ್ಥಗೊಳಿಸಲಾಗಿದೆ. ಅದನ್ನು ಮತ್ತೆ ಕೈಗೆತ್ತಿಕೊಳ್ಳುವುದಿಲ್ಲ. ಆ ಪ್ರಕರಣವನ್ನು ಮರುವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂಬ ಯಾವ ವಾದವನ್ನೂ ಕೋರ್ಟ್ ಸ್ವೀಕರಿಸುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

SCROLL FOR NEXT