ದೇಶ

'ಟಿಎಂಸಿ ನನ್ನನ್ನು ಕೊಲ್ಲಲು ಯತ್ನಿಸುತ್ತಿದೆ': ಮನೆಯ ಹೊರಗೆ ಮತ್ತೊಂದು ಬಾಂಬ್ ಸ್ಫೋಟದ ಬಳಿಕ ಬಿಜೆಪಿ ಸಂಸದ ಅರ್ಜುನ್ ಸಿಂಗ್

Lingaraj Badiger

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣದಲ್ಲಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಬಾಂಬ್‌ ಎಸೆದ ಒಂದು ವಾರದ ನಂತರ, ಮಂಗಳವಾರ ಬೆಳಗ್ಗೆ ಅವರ ಮನೆಯ ಹೊರಗೆ ಮತ್ತೊಂದು ಬಾಂಬ್ ಸ್ಫೋಟ ವರದಿಯಾಗಿದ್ದು, ಆಡಳಿತ ಪಕ್ಷ ಟಿಎಂಸಿ ನನ್ನನ್ನು ಹತ್ಯೆ ಮಾಡಲು ಪ್ರಯತ್ನಿಸಿದೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದಾರೆ.

ಇಂದು ಬೆಳಗ್ಗೆ 9:10 ರ ಸುಮಾರಿಗೆ, ಸಿಂಗ್ ಅವರ ಭಟ್ಪರಾ ನಿವಾಸದಿಂದ ಕೇವಲ 200 ಮೀಟರ್ ದೂರದಲ್ಲಿರುವ ಖಾಲಿ ಜಾಗದಲ್ಲಿ ಬಾಂಬ್ ಸ್ಫೋಟಗೊಂಡಿದೆ. "ನಾವು ಈ ಕುರಿತು ತನಿಖೆ ಮಾಡುತ್ತಿದ್ದೇವೆ. ನಮ್ಮ ಅಧಿಕಾರಿಗಳು ಅಲ್ಲಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿದಾರೆ.

ಕಳೆ ಸೆಪ್ಟೆಂಬರ್ 8 ರಂದು ನಡೆದ ದಾಳಿಯಲ್ಲಿ ಬಿಜೆಪಿ ಸಂಸದರ ನಿವಾಸದ ಗೇಟ್ ಭಾಗಶಃ ಹಾನಿಯಾಗಿದ್ದು, ಈ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ. 

ತೃಣಮೂಲ ಕಾಂಗ್ರೆಸ್ ತನ್ನನ್ನು, ತಮ್ಮ ಕುಟುಂಬ ಸದಸ್ಯರನ್ನು ಮತ್ತು ತನ್ನ ಹತ್ತಿರದ ಜನರನ್ನು ಕೊಲ್ಲಲು ನಡೆಸಿದ ಯೋಜಿತ ದಾಳಿ ಇದಾಗಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

"ಇದೊಂದು ಯೋಜಿತ ದಾಳಿ. ಟಿಎಂಸಿ ಇದರ ಹಿಂದಿದೆ... ಅವರು ನನ್ನನ್ನು ಮತ್ತು ನನ್ನ ಜನರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದು ಬಂಗಾಳದ ಗೂಂಡಾರಾಜ್(ಕಾನೂನುಬಾಹಿರತೆ)" ಎಂದು ಸಿಂಗ್ ಹೇಳಿದ್ದಾರೆ.
 

SCROLL FOR NEXT