ದೇಶ

ಕೇರಳದಲ್ಲಿ ನವೆಂಬರ್ 1 ರಿಂದ ಶಾಲೆಗಳು ಪುನರಾರಂಭ, ಪ್ರಾಥಮಿಕ ತರಗತಿಗಳೂ ಆರಂಭ

Lingaraj Badiger

ತಿರುವನಂತಪುರಂ: ರಾಜ್ಯದಲ್ಲಿ ನವೆಂಬರ್ 1 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಹೇಳಿದ್ದಾರೆ.

ಸಿಎಂ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಮಟ್ಟದ ಕೋವಿಡ್ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

1 ರಿಂದ 7ನೇ ತರಗತಿ ವರೆಗಿನ(ಪ್ರಾಥಮಿಕ ವಿಭಾಗ) ಮತ್ತು 10 ಹಾಗೂ 12ನೇ ತರಗತಿಗಳು ನವೆಂಬರ್ 1 ರಂದು ಆರಂಭವಾಗಲಿದ್ದು, ಇತರ ತರಗತಿಗಳು ನವೆಂಬರ್ 15 ರಂದು ಆರಂಭವಾಗುತ್ತವೆ. 

ಪ್ರಾಥಮಿಕ ತರಗತಿಗಳನ್ನು ಮೊದಲು ಪುನರಾರಂಭಿಸಬೇಕು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ ಎಂದು ಕೇರಳ
ಸಿಎಂ ಹೇಳಿದ್ದಾರೆ.

10 ಮತ್ತು 12 ನೇ ತರಗತಿಯ ಶಾಲೆಗಳನ್ನು ಮೊದಲು ಪುನರಾರಂಭಿಸಬೇಕಾಗಿದೆ. ಏಕೆಂದರೆ ಆ ವಿದ್ಯಾರ್ಥಿಗಳು ಮುಂದಿನ ವರ್ಷ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕು ಎಂದಿದ್ದಾರೆ.

ಶಾಲೆ ಪುನರಾರಂಭಕ್ಕೆ ಮಾಡಬೇಕಾದ ಸಿದ್ಧತೆಗಳನ್ನು ಜಂಟಿಯಾಗಿ ನಿರ್ಧರಿಸಲು ಸಾಮಾನ್ಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ಶಾಲಾ ಮಕ್ಕಳಿಗಾಗಿ ವಿಶೇಷ ಮಾಸ್ಕ್ ಗಳನ್ನು ಒದಗಿಸಬೇಕೆಂದು ಸಿಎಂ ಪಿಣರಾಯಿ ಸೂಚಿಸಿದ್ದಾರೆ. ಅಲ್ಲದೆ ಅಂತಹ ಮಾಸ್ಕ್ ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸುವಂತೆ ಶಾಲೆಗಳಿಗೆ ನಿರ್ದೇಶಿಸಿದ್ದಾರೆ.

SCROLL FOR NEXT