ಶರದ್ ಯಾದವ್ 
ದೇಶ

ತವರು ಪಕ್ಷಕ್ಕೆ ಶರದ್ ಯಾದವ್ ವಾಪಸ್? ಮಾಜಿ ನಾಯಕರನ್ನು 'ಜೆಡಿಯು' ಗೆ ಕರೆತರಲು ಯತ್ನ!

ಕಳೆದ ವರ್ಷ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ, ಜನತಾದಳ (ಯುನೈಟೆಡ್) ಪಕ್ಷವನ್ನು ತೊರೆದ ಹಿರಿಯ ರಾಜಕಾರಣಿಗಳನ್ನು ಮರಳಿ ಕರೆತರುವ ಕೆಲಸ ಮಾಡುತ್ತಿದೆ.

ಪಾಟ್ನಾ: ಕಳೆದ ವರ್ಷ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ, ಜನತಾದಳ (ಯುನೈಟೆಡ್) ಪಕ್ಷವನ್ನು ತೊರೆದ ಹಿರಿಯ ರಾಜಕಾರಣಿಗಳನ್ನು ಮರಳಿ ಕರೆತರುವ ಕೆಲಸ ಮಾಡುತ್ತಿದೆ.

ಉಪೇಂದ್ರ ಕುಶ್ವಾಹಾ ಅವರ ಪಕ್ಷ-ಆರ್‌ಎಲ್‌ಎಸ್‌ಪಿ ವಿಲೀನದೊಂದಿಗೆ ಜೆಡಿಯುಗೆ ಮರಳಿದ ನಂತರ, ಪಕ್ಷವು ಹಿರಿಯ ಸಮಾಜವಾದಿ ನಾಯಕ ಮತ್ತು ಜೆಡಿಯು ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್‌ರನ್ನು ಸಹ ಮರಳಿ ಬರಲು ಮನವೊಲಿಸುತ್ತಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ಶರದ್ ಯಾದವ್ ಅವರ ದೆಹಲಿ ನಿವಾಸಕ್ಕೆ ಭೇಟಿ ನೀಡಿದಾಗ ಉಪೇಂದ್ರ ಕುಶ್ವಾಹ ಅವರ ಮೂಲಕ ಪಕ್ಷಕ್ಕೆ ಮರಳುವಂತೆ ಮನವಿ ಮಾಡಲಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. 

2018 ರಲ್ಲಿ  ಬಿಜೆಪಿ ಜೊತೆ ಮೈತ್ರಿ ವಿರೋಧಿಸಿ, ಜೆಡಿಯು ತೊರೆದಿದ್ದ ಜನತಾ ಪರಿವಾರದ ಹಿರಿಯ ನಾಯಕ ಶರದ್ ಯಾದವ್ ಎಲ್ ಜೆಡಿ ಸ್ಥಾಪಿಸಿದ್ದರು. ಅವರು 2003 ರಲ್ಲಿ ಜೆಡಿಯು ಸ್ಥಾಪನೆಯಾದಾಗಿನಿಂದ 2016 ರವರೆಗೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಶರದ್ ಯಾದವ್ ಮೊದಲ ಬಾರಿಗೆ 1974 ರಲ್ಲಿ ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಜಬಲ್ಪುರದಿಂದ ಲೋಕಸಭೆಗೆ ಆಯ್ಕೆಯಾದರು. 1991 ರಿಂದ 2009 ರವರೆಗೆ ಬಿಹಾರದ  ಮಾಧೇಪುರ ಸೇರಿದಂತೆ ವಿವಿಧ ಲೋಕಸಭಾ ಸ್ಥಾನಗಳಿಂದ ಸ್ಪರ್ಧಿಸಿ ರಾಜಕೀಯದಲ್ಲಿ ಸಕ್ರಿಯವಾಗಿದ್ದರು.

ಅವರ ಪುತ್ರಿ ಸುಭಾಷಿಣಿ ರಾಜ್ ರಾವ್ ಅವರು 2020 ರ ವಿಧಾನಸಭಾ ಚುನಾವಣೆಯಲ್ಲಿ ಮಾಧೇಪುರದ ಬಿಹಾರಿಗಂಜ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು. ರಾಷ್ಟ್ರೀಯ ಕ್ಷೇತ್ರದಲ್ಲಿ ಪಕ್ಷದ ಸ್ಥಾನವನ್ನು ಬಲಪಡಿಸುವ ಕ್ರಮವಾಗಿ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಸ್ವಾಗತಿಸಲು ಜೆಡಿಯು ಚಿಂತಕರ ಮಂಡಳಿಯು ನೀತಿಯನ್ನು ರೂಪಿಸಿದೆ.

ಆದರೆ, ಶರದ್ ಯಾದವ್ ಇನ್ನೂ ಮರಳಲು ಒಪ್ಪಿಲ್ಲ ಮತ್ತು ಸ್ವಲ್ಪ ಸಮಯ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಕುಶ್ವಾಹ ಅವರನ್ನು ಭೇಟಿ ಮಾಡುವ ಮೊದಲು, ಯಾದವ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು.

ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ದೇಶದಲ್ಲಿ ತೃತೀಯ ರಂಗ ಸ್ಥಾಪಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳುತ್ತಿರುವ ಸಮಯದಲ್ಲಿ, ಶರದ್ ಯಾದವ್ ಅವರ ಮರಳುವಿಕೆ ಜೆಡಿಯುಗೆ ಮಹತ್ವದ ಫಲಿತಾಂಶಗಳನ್ನು ನೀಡಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ, ಶರದ್ ಯಾದವ್ ಜೆಡಿಯುಗೆ ಮರಳಲು ಒಪ್ಪಿಕೊಂಡರೆ, ಅವರ ರಾಜಕೀಯ ಅನುಭವಗಳು ರಾಷ್ಟ್ರೀಯ ರಾಜಕೀಯದಲ್ಲಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲು ಜೆಡಿಯುಗೆ ಬಹಳ ಅನುಕೂಲವಾಗಬಹುದು. ಒಂದೇ ವೇದಿಕೆಗೆ ಇತರ ಸಮಾನ ಮನಸ್ಕ ಪಕ್ಷಗಳ ನಾಯಕರನ್ನು ಧ್ರುವೀಕರಣಗೊಳಿಸಲು ಯಾದವ್ ಅವರನ್ನು ಪ್ರಭಾವಿ ನಾಯಕ ಎಂದು ಪರಿಗಣಿಸಲಾಗಿದೆ ಎಂದು ಪಾಟ್ನಾ ಮೂಲದ ರಾಜಕೀಯ ತಜ್ಞರು ಹೇಳಿದ್ದಾರೆ.

2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಶರದ್ ಯಾದವ್ ಜೆಡಿಯುಗೆ ಹಿಂತಿರುಗಿದರೆ, ಪಕ್ಷವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ. ನಿತೀಶ್ ಕುಮಾರ್ ಅವರನ್ನು ಪಕ್ಷದ ಪ್ರಧಾನ ನಾಯಕನಾಗಿ ಬಿಂಬಿಸಲು ಜೆಡಿಯು ನಾಯಕರ ಬೇಡಿಕೆಗಳ ನಡುವೆಯೂ ಯಾದವ್ ಮರಳುವಿಕೆ ಮಹತ್ವದ್ದಾಗಿದೆ ಎಂದು ಪಕ್ಷದ ವಿಶ್ವಾಸಾರ್ಹ
ಮೂಲವೊಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT