ದೇಶ

ಅಕ್ಟೋಬರ್ 4 ರಿಂದ ಮಹಾರಾಷ್ಟ್ರದಾದ್ಯಂತ ಶಾಲೆಗಳು ಪುನರಾರಂಭ

Lingaraj Badiger

ಮುಂಬೈ: ಅಕ್ಟೋಬರ್ 4 ರಿಂದ ಮಹಾರಾಷ್ಟ್ರದಾದ್ಯಂತ ಶಾಲೆಗಳು ಮತ್ತೆ ಆರಂಭವಾಗಲಿವೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಹೇಳಿದೆ.

"ಗ್ರಾಮೀಣ ಪ್ರದೇಶದಲ್ಲಿ 5 ರಿಂದ 12ನೇ ತರಗತಿಯವರೆಗೆ ದೈಹಿಕ ತರಗತಿಗಳನ್ನು ಪುನರಾರಂಭಿಸುತ್ತವೆ" ಎಂದು ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಅವರು ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ 8 ರಿಂದ 12 ನೇ ತರಗತಿಯ ದೈಹಿಕ ತರಗತಿಗಳು ಆರಂಭವಾಗಲಿವೆ ಎಂದು ಅವರು ಸಚಿವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ದೈಹಿಕ ತರಗತಿಗಳನ್ನು ನಡೆಸುತ್ತಿದ್ದ ಪ್ರದೇಶಗಳಲ್ಲಿ ಕಡಿಮೆ ಕೋವಿಡ್ -19 ಪ್ರಕರಣಗಳು ವರದಿ ಮಾಡಿವೆ. 

ದೈಹಿಕ ತರಗತಿಗಳು ನಗರ ಪ್ರದೇಶಗಳಲ್ಲಿ 1 ರಿಂದ 7 ನೇ ತರಗತಿಗಳಿಗೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1 ರಿಂದ 4 ನೇ ತರಗತಿಗಳನ್ನು ಇನ್ನೂ ಆರಂಭ ಮಾಡುವುದಿಲ್ಲ ಎಂದಿದ್ದಾರೆ.

"ಇಡೀ ರಾಜ್ಯದಲ್ಲಿ ಶಾಲೆಗಳು ಪುನರಾರಂಭಗೊಂಡರೂ ದೈಹಿಕ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಒತ್ತಾಯ ಇಲ್ಲ. ಅವರು ಹಾಜರಾಗಲು ಬಯಸಿದರೆ ಪೋಷಕರ ಒಪ್ಪಿಗೆ ಅಗತ್ಯ" ಎಂದು ಗಾಯಕ್ವಾಡ್ ಅವರು ಹೇಳಿದ್ದಾರೆ.

ಶಾಲಾ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡ 70ಕ್ಕಿಂತ ಹೆಚ್ಚು ಪೋಷಕರು ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಒಲವು ತೋರಿದ್ದಾರೆ ಎಂದು ಗಾಯಕ್ವಾಡ್ ತಿಳಿಸಿದ್ದಾರೆ.

SCROLL FOR NEXT